Home ಟಾಪ್ ಸುದ್ದಿಗಳು ಮುಡಾ ಹಗರಣ: ಸಿದ್ದರಾಮಯ್ಯ ಭ್ರಷ್ಟ ಅಲ್ಲ, ಸಿಎಂ ಬೆನ್ನಿಗೆ ನಿಂತ ಪ್ರತಾಪ್‌ ಸಿಂಹ

ಮುಡಾ ಹಗರಣ: ಸಿದ್ದರಾಮಯ್ಯ ಭ್ರಷ್ಟ ಅಲ್ಲ, ಸಿಎಂ ಬೆನ್ನಿಗೆ ನಿಂತ ಪ್ರತಾಪ್‌ ಸಿಂಹ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್. ನಾನು ಈಗಲೂ ಸಿದ್ದರಾಮಯ್ಯ ಅವರನ್ನು ಭ್ರಷ್ಟ ಅನ್ನಲ್ಲ. ರಾಜ್ಯದಲ್ಲಿ ಸಿಎಂ ಆದವರಿಗೆ ಹೋಲಿಸಿದ್ರೆ ಸಿದ್ದರಾಮಯ್ಯ ಅಷ್ಟೇನೂ ಆಸ್ತಿವಂತ ಅಲ್ಲ ಎಂದು ಮಾಜಿ ಸಂಸದ ಪ್ರತಾಪ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 14 ಸೈಟುಗಳಿಗೆ ನಿಮ್ಮ ವರ್ಚಸ್ಸು ಕುಗ್ಗುವಂತೆ ಮಾಡಿಕೊಳ್ಳಬೇಡಿ. ಕೂಡಲೇ ಮುಡಾಕ್ಕೆ ಸೈಟ್ ಸೆರೆಂಡರ್ ಮಾಡಿ ಘನತೆ ಉಳಿಸಿಕೊಳ್ಳಿ. ಸಂತೋಷ್ ಹೆಗ್ಡೆ ಎನ್.ಕುಮಾರ್ ಅವರಂಥ ದಕ್ಷ ನ್ಯಾಯಮೂರ್ತಿಗಳಿಂದ ಮುಡಾ ಹಗರಣ ತನಿಖೆ ಮಾಡಿಸಿ. ನಿಮ್ಮ ಗಮನಕ್ಕೆ ಬಾರದೆ ನಿಮ್ಮ ಬಾಮೈದ ತಪ್ಪು ಮಾಡಿರಬಹುದು. ನೀವು ಸೈಟು ಹಿಂತಿರುಗಿಸಿ, ಒಂದೊಳ್ಳೆ ಮೇಲ್ಪಂಕ್ತಿ ಹಾಕಿ ಎಂದರು.

ನಿಮ್ಮ ತೀರ್ಮಾನದಿಂದ 4 ಸಾವಿರ ಕೋಟಿ ರೂ. ಮುಡಾ ಲಾಭ ಬರುತ್ತೆ. ನೊಣ ತಿಂದು ಜಾತಿ ಕೆಡಿಸಿಕೊಳ್ಳಬೇಡಿ ಎಂದು ಸಿಎಂ ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ಮನವಿ ಮಾಡಿದರು.

Join Whatsapp
Exit mobile version