Home ಟಾಪ್ ಸುದ್ದಿಗಳು ಮಣಿಪುರದಲ್ಲಿ ಬಾಂಬ್‌ ಸ್ಫೋಟ: ಬಿಜೆಪಿ ಮಾಜಿ ಶಾಸಕನ ಪತ್ನಿ ಮೃತ್ಯು!

ಮಣಿಪುರದಲ್ಲಿ ಬಾಂಬ್‌ ಸ್ಫೋಟ: ಬಿಜೆಪಿ ಮಾಜಿ ಶಾಸಕನ ಪತ್ನಿ ಮೃತ್ಯು!

ಇಂಫಾಲ್‌: ಮಣಿಪುರದ ಕಾಂಗ್‌ ಪೋಕ್ಪಿ ಜಿಲ್ಲೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಬಿಜೆಪಿ ಮಾಜಿ ಶಾಸಕರ ಪತ್ನಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಯಿಕುಲ್ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಯಮ್‌ಥಾಂಗ್ ಹಾಕಿಪ್ ಅವರ ಮನೆಯ ಪಕ್ಕದಲ್ಲೇ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

ಹೌಕಿಪ್ ಅವರ 2ನೇ ಪತ್ನಿ ಸಪಂ ಚಾರುಬಾಲಾ ಅವರು ಸ್ಫೋಟದಲ್ಲಿ ಗಾಯಗೊಂಡ ನಂತರ ಅವರನ್ನು ಸಾಯಿಕುಲ್‌ ನಲ್ಲಿರುವ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp
Exit mobile version