►ಬಳ್ಳಾರಿ ಪಾದಯಾತ್ರೆಗೆ ಮುಹೂರ್ತ ಫಿಕ್ಸ್?
ಬೆಳಗಾವಿ: ಶನಿವಾರ ಮೈಸೂರಿನಲ್ಲಿ ಪಾದಯಾತ್ರೆ ಅಂತ್ಯವಾಗುತ್ತಿದಂತೆ ಬಿಜೆಪಿ ರೆಬೆಲ್ಸ್ ಟೀಂ ಫುಲ್ ಆ್ಯಕ್ಟೀವ್ ಆಗಿದ್ದು, ಬಿಜೆಪಿ ಮನೆಯೊಳಿನ ಕಿಚ್ಚು ಮತ್ತೆ ಧಗಧಗಿಸಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವ ಒಪ್ಪದಿರೋ ಟೀಂ ಇದೀಗ ಗೌಪ್ಯ ಸ್ಥಳದಲ್ಲಿ ಒಗ್ಗಟ್ಟಿನ ಪ್ರದರ್ಶನವೇ ಮಾಡಿದೆ. ಬೆಳಗಾವಿಯ ಹೊರವಲಯದಲ್ಲಿ 10ಕ್ಕೂ ಹೆಚ್ಚು ಬಿಜೆಪಿಯ ಘಟಾನುಘಟಿ ನಾಯಕರು ಗೌಪ್ಯ ಸಭೆ ನಡೆಸಿ, ಹೊಸ ಸಮರಕ್ಕೆ ಸಿದ್ಧರಾಗಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಿಜೆಪಿ ಶಾಸಕ ಯತ್ನಾಳ್ ನೇತೃತ್ವದಲ್ಲಿ ಸಭೆ ನಡೆಸಲಾಯ್ತು. ಅದರಲ್ಲೂ ಬಿಎಸ್ವೈ ಮಾಜಿ ಆಪ್ತ ಸಹಾಯಕ ಭಾಗಿಯಾಗಿರುವುದು ಕುತೂಹಲಕ್ಕೂ ಕಾರಣವಾಗಿದೆ. ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಪ್ರತಾಪ್ ಸಿಂಹ, ಅಣ್ಣಾಸಾಹೇಬ್ ಜೊಲ್ಲೆ, ಕುಮಾರ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ ಭಾಗಿಯಾಗಿದ್ದರು.
ಮೈಸೂರು ಪಾದಯಾತ್ರೆಗೆ ಟಕ್ಕರ್ ನೀಡಲು ಬಿಜೆಪಿ ರೆಬೆಲ್ ಟೀಂ ಮುಂದಾಗಿದೆ. ಪ್ರತ್ಯೇಕ ಪಾದಯಾತ್ರೆ ಮಾಡೋ ಪ್ಲ್ಯಾನ್ ಮಾಡಿದ್ದಾರೆ. ಸೆಪ್ಟೆಂಬರ್ 17ರಿಂದಲೇ ರೆಬೆಲ್ ಮುಖಂಡರಿಂದ ಬಳ್ಳಾರಿಗೆ ಪಾದಯಾತ್ರೆ ಮಾಡೋ ಸಾಧ್ಯತೆಯೂ ಇದೆ. ವಾಲ್ಮೀಕಿ ನಿಗಮ ಹಗರಣ, SC, ST ಅನುದಾನ ದುರ್ಬಳಕೆಗೆ ವಿರೋಧ ಹೋರಾಟಕ್ಕೆ ಚಿಂತನೆ ನಡೆಸಲಾಗಿದೆ.