Home ಟಾಪ್ ಸುದ್ದಿಗಳು ರೈತರ ಪ್ರತಿಭಟನೆ | ಕೊರೆವ ಚಳಿಗೆ ಓರ್ವ ರೈತ ಬಲಿ

ರೈತರ ಪ್ರತಿಭಟನೆ | ಕೊರೆವ ಚಳಿಗೆ ಓರ್ವ ರೈತ ಬಲಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿಗಳನ್ನು ವಿರೋಧಿಸಿ ದೆಹಲಿ ಗಡಿಭಾಗಗಳಲ್ಲಿ ಕಳೆದ ಒಂದು ತಿಂಗಳಿನಿಂದ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಓರ್ವ ರೈತ ತೀವ್ರ ಚಳಿಯ ಪರಿಣಾಮವಾಗಿ ಸಾವಿಗೀಡಾಗಿದ್ದಾರೆ. ಬಾಘ್ಪತ್ ಜಿಲ್ಲೆಯ ಮೊಜಿದಾಬಾದ್ ನಿವಾಸಿ ಗಲನ್ ಸಿಂಗ್ ತೋಮರ್ ಮೃತರಾದ ರೈತ.

ಉತ್ತರ ಪ್ರದೇಶ-ದೆಹಲಿಯ ಘಾಝಿಪುರ ಗಡಿಯಲ್ಲಿ ಪ್ರತಿಭಟನೆ ನಿರತರಾಗಿದ್ದ ಗಲನ್ ಸಿಂಗ್ ಮೃತಪಟ್ಟಿದ್ದಾರೆ. ಪ್ರಾಥಮಿಕ ವೈದ್ಯಕೀಯ ತಪಾಸಣೆಯ ಪ್ರಕಾರ, ಗಲನ್ ಸಿಂಗ್ ಚಳಿಯ ಕಾರಣದಿಂದ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿರುವುದಾಗಿ ವರದಿಗಳು ತಿಳಿಸಿವೆ. ಗಲನ್ ಸಿಂಗ್ ಗೆ 65-70 ವರ್ಷಗಳಾಗಿರಬಹುದು ಎನ್ನಲಾಗಿದೆ.

ಮೋದಿ ಸರಕಾರದ ಕೃಷಿ ನೀತಿ ವಿರೋಧಿಸಿ ದೆಹಲಿಯಲ್ಲಿ ರೈತರು ತೀವ್ರ ಹೋರಾಟ ನಡೆಸುತ್ತಿದ್ದಾರೆ. ಹೆದ್ದಾರಿಗಳಲ್ಲೇ ಟೆಂಟ್ ಹಾಕಿ ರಾತ್ರಿ ಕಳೆಯುತ್ತಿದ್ದಾರೆ. ಲಕ್ಷಾಂತರ ರೈತರು ದೆಹಲಿ ಗಡಿಗಳಲ್ಲಿ ಬೀಡುಬಿಟ್ಟಿದ್ದಾರೆ. ಇಂದು ದೆಹಲಿಯಲ್ಲಿ 15 ವರ್ಷಗಳ ಕನಿಷ್ಠ 1 ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿತ್ತು.

Join Whatsapp
Exit mobile version