Home ಟಾಪ್ ಸುದ್ದಿಗಳು ಮಗನ ವರ್ತನೆಯಿಂದ ಬೇಸತ್ತು ಸಾಕು ನಾಯಿಗೆ ಆಸ್ತಿಯಲ್ಲಿ ಪಾಲು ಬರೆದಿಟ್ಟ ರೈತ!

ಮಗನ ವರ್ತನೆಯಿಂದ ಬೇಸತ್ತು ಸಾಕು ನಾಯಿಗೆ ಆಸ್ತಿಯಲ್ಲಿ ಪಾಲು ಬರೆದಿಟ್ಟ ರೈತ!

ಭೋಪಾಲ್ : ಮಗನ ವರ್ತನೆಯಿಂದ ಬೇಸತ್ತ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ 50 ವರ್ಷದ ರೈತರೊಬ್ಬರು ತಮ್ಮ ಆಸ್ತಿಯಲ್ಲಿ ಅರ್ಧ ಪಾಲು ಪತ್ನಿಗೂ, ಉಳಿದ ಅರ್ಧ ಪಾಲನ್ನು ಸಾಕು ನಾಯಿಗೂ ಮೀಸಲಿಟ್ಟು ವಿಲ್ ಸಿದ್ಧಪಡಿಸಿದ ಬಗ್ಗೆ ವರದಿಯಾಗಿದೆ.

ಎರಡು ದಿನಗಳ ಹಿಂದೆ ಓಂ ನಾರಾಯಣ್ ತಮ್ಮ ವಿಲ್ ಅನ್ನು ನೋಟರಿ ಮಾಡಿಸಿದ್ದಾರೆ. ತಮಗೆ ನಾಲ್ಕು ಎಕರೆ ಜಮೀನಿದ್ದು, ಈ ಜಮೀನನ್ನು ತನ್ನ ಮರಣಾ ನಂತರ ಪತ್ನಿ ಹಾಗೂ ಸಾಕು ನಾಯಿಗೆ ಸಮಾನಾಂತರ ಹಂಚುವಂತೆ ಈ ಪತ್ರದಲ್ಲಿ ಬರೆಸಿದ್ದಾರೆ.

ತಮ್ಮ ನಾಯಿ ಮತ್ತು ಪತ್ನಿ ತಮಗೆ ಹೆಚ್ಚು ಸೇವೆ ಮಾಡಿದ್ದಾರೆ. ಹೀಗಾಗಿ ಅವರೇ ತಮಗೆ ಹೆಚ್ಚು ಆಪ್ತರು ಎಂದು ಓಂ ನಾರಾಯಣ್ ಬರೆಸಿದ್ದಾರೆ. ನಾಯಿ ಸತ್ತ ಬಳಿಕ, ಆ ನಾಯಿಯನ್ನು ಯಾರು ಚೆನ್ನಾಗಿ ನೋಡಿಕೊಳ್ಳುತ್ತಾರೋ ಅವರಿಗೆ ಆ ಆಸ್ತಿ ದೊರೆಯಬೇಕು ಎಂದೂ ಅವರು ಸೂಚಿಸಿದ್ದಾರೆ.     

Join Whatsapp
Exit mobile version