Home ಟಾಪ್ ಸುದ್ದಿಗಳು ಬಿಹಾರದ 11 ಕಾಂಗ್ರೆಸ್ ಶಾಸಕರು ರಾಜೀನಾಮೆ? | NDA ಸೇರಲು ಸಿದ್ಧತೆ?

ಬಿಹಾರದ 11 ಕಾಂಗ್ರೆಸ್ ಶಾಸಕರು ರಾಜೀನಾಮೆ? | NDA ಸೇರಲು ಸಿದ್ಧತೆ?

ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿ ತೀವ್ರ ಮುಖಭಂಗ ಎದುರಿಸಿದ್ದ ಕಾಂಗ್ರೆಸ್ ಈಗ ಮತ್ತೊಮ್ಮೆ ಭಾರೀ ಮುಜುಗರ ಎದುರಿಸುವುದಕ್ಕೆ ಕಾರಣವಾಗಿದೆ. ಬಿಹಾರದಲ್ಲಿ ಆಯ್ಕೆಯಾಗಿರುವ 19 ಶಾಸಕರಲ್ಲಿ 11 ಮಂದಿ ಪಕ್ಷ ತೊರೆಯುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಭರತ್ ಸಿಂಗ್ ಮುನ್ಸೂಚನೆ ನೀಡಿದ್ದಾರೆ.

ಈ 11 ಮಂದಿ ಹಣಕೊಟ್ಟು ಟಿಕೆಟ್ ಪಡೆದು ಶಾಸಕರಾದವರು. ಇವರು ಯಾರೂ ಮೂಲತಃ ಕಾಂಗ್ರೆಸ್ ನವರೇ ಅಲ್ಲ. ಇವರೆಲ್ಲ ಎನ್ ಡಿಎ ಸೇರುವ ಸಾಧ್ಯತೆಯಿದೆ ಎಂದೂ ಅವರು ಏಳಿದ್ದಾರೆ.

11 ಶಾಸಕರ ಜೊತೆಗೆ ರಾಜ್ಯಸಭೆ ಸದಸ್ಯ ಅಖಿಲೇಶ್ ಪ್ರಸಾದ್ ಸಿಂಗ್, ರಾಜ್ಯ ಘಟಕದ ಅಧ್ಯಕ್ಷ ಮೋಹನ್ ಝಾ, ಹಿರಿಯ ಮುಖಂಡ ಸದಾನಂದ ಸಿಂಗ್ ಕೂಡ ಪಕ್ಷ ತೊರೆಯುವ ಸಂಭವವಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಭಾಗಲ್ಪುರ ಶಾಸಕ ಅಜಿತ್ ಶರ್ಮಾ, ಮಾಜಿ ಶಾಸಕರು ಕೊಟ್ಟ ಹೇಳಿಕೆಯಲ್ಲಿ ಹುರುಳಿಲ್ಲ, ಯಾರೊಬ್ಬರೂ ಪಕ್ಷ ತೊರೆಯವುದಿಲ್ಲ ಎಂದಿದ್ದಾರೆ.

Join Whatsapp
Exit mobile version