Home ಟಾಪ್ ಸುದ್ದಿಗಳು ಬೆಂಗಳೂರು: ರಸ್ತೆಯಲ್ಲಿ ರಾಶಿಗಟ್ಟಲೆ ಮೊಳೆಗಳು ಪತ್ತೆ, ಪಂಕ್ಚರ್‌ ಅಂಗಡಿಯವರ ಕೃತ್ಯವೆಂದ ನೆಟ್ಟಿಗರು

ಬೆಂಗಳೂರು: ರಸ್ತೆಯಲ್ಲಿ ರಾಶಿಗಟ್ಟಲೆ ಮೊಳೆಗಳು ಪತ್ತೆ, ಪಂಕ್ಚರ್‌ ಅಂಗಡಿಯವರ ಕೃತ್ಯವೆಂದ ನೆಟ್ಟಿಗರು

ಬೆಂಗಳೂರು: ಜಾಲಹಳ್ಳಿಯ ಕುವೆಂಪು ವೃತ್ತದ ಕೆಳಸೇತುವೆಯಲ್ಲಿ ರಾಶಿಗಟ್ಟಲೆ ಮೊಳೆಗಳು ಒಂದೆಡೆಯೇ ಪತ್ತೆಯಾಗಿದ್ದು, ಟ್ರಾಫಿಕ್‌ ಪೊಲೀಸರೇ ಅವುಗಳನ್ನು ಸ್ಥಳದಿಂದ ತೆಗೆದು ಕ್ಲೀನ್‌ ಮಾಡುವ ವೀಡಿಯೊ ವೈರಲ್ ಆಗಿದೆ.

ರಸ್ತೆ ಸುರಕ್ಷತೆಯನ್ನು ಖಚಿತಪಡಿಸಲು ಪೊಲೀಸರು ಆಕ್ಷನ್‌ಗೆ ಇಳಿದಿದ್ದರು. ವಾಹನಗಳನ್ನು ಪಂಕ್ಚರ್ ಮಾಡುವ ಉದ್ದೇಶದಿಂದಲೇ ಮೊಳೆಗಳನ್ನು ರಸ್ತೆಯಲ್ಲಿ ಎಸೆಯಲಾಗಿದೆ ಎಂದು ತಿಳಿದುಬಂದಿದೆ. ಪೊಲೀಸ್‌ ಅಧಿಕಾರಿಗಳು ಹೆಚ್ಚಿನ ಮೊಳೆಗಳನ್ನು ಸಂಗ್ರಹಿಸಿ ಜಾಗವನ್ನು ಪ್ರಯಾಣಕ್ಕೆ ಸುರಕ್ಷಿತಗೊಳಿಸಿದ್ದಾರೆ. ಇನ್ನೂ ಇರಬಹುದಾದ ಮೊಳೆಗಳ ಬಗ್ಗೆ ಹುಷಾರಾಗಿರುವಂತೆ ಎಚ್ಚರಿಕೆ ನೀಡಿದ್ದಾರೆ.

ವೈರಲ್‌ ವಿಡಿಯೋ ಪೋಸ್ಟ್‌ಗೆ ನೆಟ್ಟುಗರು ಪ್ರತಿಕ್ರಿಯಿಸಿದ್ದಾರೆ. ಪೊಲೀಸರು ಮಾಡಿದ ಕೆಲಸವನ್ನು ಶ್ಲಾಘಿಸಿದ್ದಾರೆ. ಜೊತೆಗೆ ತೊಂದರೆ ಸೃಷ್ಟಿಸಲು ಮೊಳೆ ಎಸೆದ ಅಪರಾಧಿಗಳನ್ನು ಖಂಡಿಸಿದ್ದಾರೆ. ಹೆಚ್ಚಿನ ವ್ಯಾಪಾರಕ್ಕಾಗಿ ಹತ್ತಿರದ ಈ ಕೆಲಸ ಮಾಡಿರಬಹುದು ಎಂದು ಕೆಲವರು ಅನುಮಾನಿಸಿದ್ದಾರೆ. ಪೊಲೀಸರು ಈ ನಿಟ್ಟಿನಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.

Join Whatsapp
Exit mobile version