Home ಟಾಪ್ ಸುದ್ದಿಗಳು ಒಲಿಂಪಿಕ್ಸ್‌ನಲ್ಲಿ ಸೋಲಿನೊಂದಿಗೆ ಟೆನಿಸ್‌ಗೆ ವಿದಾಯ ಘೋಷಿಸಿದ ರವಿ ಬೋಪಣ್ಣ

ಒಲಿಂಪಿಕ್ಸ್‌ನಲ್ಲಿ ಸೋಲಿನೊಂದಿಗೆ ಟೆನಿಸ್‌ಗೆ ವಿದಾಯ ಘೋಷಿಸಿದ ರವಿ ಬೋಪಣ್ಣ

ಪ್ಯಾರಿಸ್‌: ರವಿವಾರ ರಾತ್ರಿ ಪ್ಯಾರಿಸ್‌ ಒಲಿಂಪಿಕ್ಸ್‌ನ್ನಲ್ಲಿ ಸೋತ ಬಳಿಕ ಕನ್ನಡಿಗ ರೋಹನ್‌ ಬೋಪಣ್ಣ ತಮ್ಮ 22 ವರ್ಷಗಳ ಟೆನಿಸ್‌ ಬದುಕಿಗೆ ವಿದಾಯ ಹೇಳಿದ್ದಾರೆ.

ಭಾರತದ ಜೋಡಿ ರೋಹನ್‌ ಬೋಪಣ್ಣ-ಎನ್‌. ಶ್ರೀರಾಮ್‌ ಬಾಲಾಜಿ ರವಿವಾರ ರಾತ್ರಿ ನಡೆದ ಪುರುಷರ ಡಬಲ್ಸ್‌ ಪಂದ್ಯದ ಮೊದಲ ಸುತ್ತಿನಲ್ಲೇ ಆತಿಥೇಯ ಫ್ರಾನ್ಸ್‌ನ ಎಡ್ವರ್ಡ್‌ ರೋಜರ್‌ ವಸೆಲಿನ್‌-ಗೇಲ್‌ ಮಾನ್‌ಫಿಲ್ಸ್‌ ಎದುರು ಪರಾಭವಗೊಂಡಿದ್ದಾರೆ.

ನಾನು ಎರಡು ದಶಕಗಳ ಕಾಲ ಭಾರತವನ್ನು ಪ್ರತಿನಿಧಿಸುತ್ತೇನೆಂದು ಭಾವಿಸಿದವನೇ ಅಲ್ಲ. ಇಂತಹದೊಂದು ಹೆಮ್ಮೆಯ ಸಂಗತಿ ನನ್ನದಾಗಿದೆ. ಪ್ಯಾರಿಸ್‌ನಲ್ಲಿ ಕೊನೆಯ ಸಲ ದೇಶವನ್ನು ಪ್ರತಿನಿಧಿಸಿ ನಿರ್ಗಮಿಸುತ್ತಿದ್ದೇನೆ. ಆಟ ಗಾರನಲ್ಲದ ಹೊರತಾಗಿಯೂ ಟೆನಿಸ್‌ ಜತೆಗಿನ ನನ್ನ ನಂಟು ಮುಂದುವರಿಯಲಿದೆ ಎಂದು ಬೋಪಣ್ಣ ಹೇಳಿದ್ದಾರೆ.

Join Whatsapp
Exit mobile version