Home ಟಾಪ್ ಸುದ್ದಿಗಳು ಮಹಾರಾಷ್ಟ್ರ: ಕಾಡಿನಲ್ಲಿ ಸರಪಳಿಯಿಂದ ಮರಕ್ಕೆ ಕಟ್ಟಿಹಾಕಿದ್ದ ಸ್ಥಿತಿಯಲ್ಲಿ ಮಹಿಳೆ ಪತ್ತೆ

ಮಹಾರಾಷ್ಟ್ರ: ಕಾಡಿನಲ್ಲಿ ಸರಪಳಿಯಿಂದ ಮರಕ್ಕೆ ಕಟ್ಟಿಹಾಕಿದ್ದ ಸ್ಥಿತಿಯಲ್ಲಿ ಮಹಿಳೆ ಪತ್ತೆ

ಮುಂಬೈ: ಮರಕ್ಕೆ ಕಬ್ಬಿಣದ ಸರಪಳಿಯಲ್ಲಿ ಕಟ್ಟಿಹಾಕಿದ ಸ್ಥಿತಿಯಲ್ಲಿ ಮಹಿಳೆಯೊಬ್ಬಳು ಮಹಾರಾಷ್ಟ್ರದ ಸಿಂಧುದುರ್ಗ ದಟ್ಟ ಅರಣ್ಯದಲ್ಲಿ ಪತ್ತೆಯಾಗಿರುವ ಆಶ್ಚರ್ಯ ಘಟನೆ ವರದಿಯಾಗಿದೆ. ಸುಮಾರು 50 ವರ್ಷದ ಮಹಿಳೆಯನ್ನು ಕಬ್ಬಿಣದ ಸರಪಳಿಯಿಂದ ಮರಕ್ಕೆ ಕಟ್ಟಿಹಾಕಲಾಗಿದ್ದು, ಆಕೆಯ ಬಳಿ ಅಮೆರಿಕದ ಪಾಸ್‌ಪೋರ್ಟ್‌ನ ಜೆರಾಕ್ಸ್‌ ಮತ್ತು ತಮಿಳುನಾಡು ವಿಳಾಸವಿರುವ ಆಧಾರ್‌ ಕಾರ್ಡ್‌ ಪತ್ತೆಯಾಗಿದೆ.

ಮುಂಬೈನಿಂದ ಸುಮಾರು 450 ಕಿಲೋಮೀಟರ್ ದೂರದಲ್ಲಿರುವ ಸೋನುರ್ಲಿ ಗ್ರಾಮದಲ್ಲಿ ಸಂಜೆ ಕುರಿಗಾಹಿಯೊಬ್ಬರಿಗೆ ಅಳಲು ಕೇಳಿದ್ದು, ಸರಪಳಿಯಲ್ಲಿ ಸಿಲುಕಿರುವ ಮತ್ತು ಸಂಕಷ್ಟದಲ್ಲಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ರಕ್ಷಿಸಿ ನಂತರ ಸಿಂಧುದುರ್ಗದ ಓರೋಸ್‌ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಕೆಯನ್ನು ಲಲಿತಾ ಕಯಿ ಎಂದು ಗುರುತಿಸಲಾಗಿದ್ದು, ಆಕೆಯ ಮಾನಸಿಕ ಮತ್ತು ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ, ಅವರಿಗೆ ಉನ್ನತ ಚಿಕಿತ್ಸೆಗಾಗಿ ಗೋವಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

ಸದ್ಯ ಆಕೆ ಅಪಾಯದಿಂದ ಪಾರಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆಕೆ ಮನೋ ಖಾಯಿಲೆಯಿಂದ ಬಳಲುತ್ತಿದ್ದಾಳೆ. ಅದಕ್ಕೆ ಬೇಕಾದ ಸೂಕ್ತ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ನಾವು ಆಕೆಯ ತಮಿಳುನಾಡು ವಿಳಾಸ ಆಧಾರ್ ಕಾರ್ಡ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಪಾಸ್‌ಪೋರ್ಟ್‌ನ ಜೆರಾಕ್ಸ್‌ ಆಕೆಯ ಬಳಿ ಇತ್ತು. ಆಕೆಯ ವೀಸಾ ಅವಧಿ ಮುಗಿದಿದೆ.

Join Whatsapp
Exit mobile version