Home ಟಾಪ್ ಸುದ್ದಿಗಳು ಬೆಂಗಳೂರು: ಚೀಟಿ ಹಣದ ಹೆಸರಲ್ಲಿ 600 ಜನರಿಗೆ ವಂಚನೆ; 40 ಕೋಟಿ ರೂ ಹಣದೊಂದಿಗೆ ದಂಪತಿ...

ಬೆಂಗಳೂರು: ಚೀಟಿ ಹಣದ ಹೆಸರಲ್ಲಿ 600 ಜನರಿಗೆ ವಂಚನೆ; 40 ಕೋಟಿ ರೂ ಹಣದೊಂದಿಗೆ ದಂಪತಿ ಪರಾರಿ!

0

ಬೆಂಗಳೂರು: ಚೀಟಿ ಹಣದ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿದ್ದ ಸುಧಾ ಹಾಗೂ ಸಿದ್ದಿಚಾರಿ ದಂಪತಿ ಇದೀಗ ಸಾರ್ವಜನಿಕರಿಗೆ ಮೋಸ ಮಾಡಿ ಹಣದೊಂದಿಗೆ ಪರಾರಿಯಾಗಿದ್ದಾರೆ.

ಬೆಂಗಳೂರಿನ ಜರಗನಹಳ್ಲಿಯಲ್ಲಿ ಘಟನೆ ನಡೆದಿದ್ದು ದಂಪತಿ ಸುಮಾರು 40 ಕೋಟಿ ರೂ. ಚೀಟಿ ಹಣದೊಂದಿಗೆ ಎಸ್ಕೇಪ್ ಆಗಿದ್ದಾರೆ. 20 ವರ್ಷಗಳಿಂದ ಜರಗನಹಳ್ಳಿಯಲ್ಲಿ ವಾಸವಾಗಿದ್ದ ದಂಪತಿ ಚೀಟಿ ವ್ಯವಹಾರದ ಹೆಸರಲ್ಲಿ 600ಕ್ಕೂ ಹೆಚ್ಚು ಜನರಿಂದ ಹಣ ಕಟ್ಟಿಸಿಕೊಂಡಿದ್ದರು. ಇವರನ್ನು ನಂಬಿದ ಜನರು 5 ರಿಂದ 10 ಲಕ್ಷದವರೆಗೂ ಹಣ ನೀಡಿದ್ದಾರೆ. ಆರಂಭದಲ್ಲಿ ಚೀಟಿ ಹಣ ಕೊಡುತ್ತಿದ್ದ ದಂಪತಿ ಕಳೆದ ಒಂದು ವರ್ಷದಿಂದ ಹಣ ನೀಡದೇ ಸತಾಯಿಸುತ್ತಿದ್ದರು. ಕಳೆದ ತಿಂಗಳ ಜೂನ್ 3ರಂದೇ ದಂಪತಿ ಪರಾರಿಯಾಗಿದ್ದು ಈ ಸಂಬಂಧ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೆ ದಂಪತಿಗಳ ಬಂಧನಕ್ಕೆ ಮೂರು ತಂಡಗಳನ್ನು ರಚಿಸಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version