Home ಟಾಪ್ ಸುದ್ದಿಗಳು ಗೋಮಾಂಸ ಆಮದು ಪುನಾರಂಭವಾಗಲಿ: ಬಾಂಗ್ಲಾದೇಶಕ್ಕೆ ಮೋದಿ ಸರ್ಕಾರ ಮನವಿ

ಗೋಮಾಂಸ ಆಮದು ಪುನಾರಂಭವಾಗಲಿ: ಬಾಂಗ್ಲಾದೇಶಕ್ಕೆ ಮೋದಿ ಸರ್ಕಾರ ಮನವಿ

ನವದೆಹಲಿ: ಗೋಮಾಂಸ ಆಮದನ್ನು ಪುನಾರಂಭಿಸುವಂತೆ ಬಾಂಗ್ಲಾದೇಶಕ್ಕೆ ಮೋದಿ ಸರ್ಕಾರ ಮನವಿ ಮಾಡಿದೆ. ಸ್ಥಳೀಯ ಜಾನುವಾರು ಸಾಕಾಣೆಗಾರರನ್ನು ರಕ್ಷಿಸಲು ಮತ್ತು ದೇಶಿಯ ಜಾನುವಾರು ವಲಯವನ್ನು ಸುಧಾರಿಸಲು ಬಾಂಗ್ಲಾದೇಶ ಸರ್ಕಾರವು ಭಾರತದಿಂದ ಎಮ್ಮೆ ಮಾಂಸ ಸೇರಿದಂತೆ ಪ್ರೋಝೆನ್ ಮಾಂಸವನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆಯನ್ನು ನಿಲ್ಲಿಸಿತ್ತು.

ಸದ್ಯ ಢಾಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಮೀನುಗಾರಿಕೆ ಮತ್ತು ಜಾನುವಾರು ಸಚಿವಾಲಯಕ್ಕೆ ಈ ಸಮಸ್ಯೆಯನ್ನು ಬಗೆಹರಿಸುವಂತೆ ಕೋರಿ ಪತ್ರ ಬರೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪ್ರೋಝೆನ್ ಮಾಡಿದ ಎಮ್ಮೆ ಮಾಂಸ ಸೇರಿದಂತೆ ಇತರೆ ಮಾಂಸವನ್ನು ಆಮದು ಮಾಡಿಕೊಳ್ಳಲು ಪಶುಸಂಗೋಪನಾ ಇಲಾಖೆಯಿಂದ ಪೂರ್ವಾನುಮತಿ ಪಡೆಯಬೇಕೆಂದು ವಾಣಿಜ್ಯ ಸಚಿವಾಲಯವು ಏಪ್ರಿಲ್ 2022 ರಲ್ಲಿ ಹೊರಡಿಸಿದ ಆಮದು ನೀತಿ 2021 – 2024 ರ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ಕೆಲವು ತಿಂಗಳುಗಳಿಂದ ಪ್ರೋಝೆನ್ ಗೋಮಾಂಸವನ್ನು ಆಮದು ಮಾಡಿಕೊಳ್ಳುತ್ತಿಲ್ಲ. ಈ ಮಧ್ಯೆ ಆಮದು ನೀತಿಯಲ್ಲಿನ ಬದಲಾವಣೆಯಿಂದಾಗಿ ತಮ್ಮ ವ್ಯವಹಾರಗಳ ಮೇಲೆ ದುಷ್ಪರಿಣಾಮ ಬೀರಿದೆ ಎಂದು ವ್ಯಾಪಾರಿಗಳು ದೂರಿದ್ದಾರೆ.ಭಾರತೀಯ ಕಂಪೆನಿಗಳು ಬಾಂಗ್ಲಾದೇಶದಿಂದ ಮಾಂಸದ ಅತಿದೊಡ್ಡ ರಫ್ತುದಾರರು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಬಾಂಗ್ಲಾದೇಶ ಇದೀಗ ಮಾಂಸ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ. ಆದರೆ ಕೆಲವು ಐಷಾರಾಮಿ ಹೋಟೆಲ್’ಗಳು ಮಾಂಸವನ್ನು ಆಮದು ಮಾಡಿಕೊಳ್ಳುತ್ತಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. 2017 – 18 ರ ಆರ್ಥಿಕ ವರ್ಷದಲ್ಲಿ 14 ದೇಶಗಳಿಂದ ಮಾಂಸವನ್ನು ಆಮದು ಮಾಡಿಕೊಳ್ಳಲು 2.5 ಮಿಲಿಯನ್ ಅಮೆರಿಕನ್ ಡಾಲರ್ ಖರ್ಚು ಮಾಡಿದೆ.

2020-21 ರ ಆರ್ಥಿಕ ವರ್ಷದಲ್ಲಿ ಬಾಂಗ್ಲಾದೇಶವು 8.44 ಮಿಲಿಯನ್ ಟನ್ ಮಾಂಸವನ್ನು ಉತ್ಪಾದಿಸಿದೆ ಎಂದು ಜಾನುವಾರು ಸೇವೆಗಳ ಇಲಾಖೆ (DLS) ವರದಿ ಮಾಡಿದೆ.

ಬಾಂಗ್ಲಾದೇಶವು 14 ದೇಶಗಳಿಂದ ಮಾಂಸವನ್ನು ಆಮದು ಮಾಡಿಕೊಳ್ಳುತ್ತದೆ. ಆಮದು ಮಾಡಿಕೊಳ್ಳುವ ಇತರ ದೇಶಗಳೆಂದರೆ ಭಾರತ, ಇಥಿಯೋಪಿಯಾ, ಫ್ರಾನ್ಸ್, ಕೊರಿಯಾ, ಥೈಲ್ಯಾಂಡ್, ಚೀನಾ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಅಮೆರಿಕ, ಪಾಕಿಸ್ತಾನ, ಮಲೇಷ್ಯಾ, ಸಿಂಗಾಪುರ ಮತ್ತು ಇಂಡೋನೇಷ್ಯಾ.

Join Whatsapp
Exit mobile version