Home ಟಾಪ್ ಸುದ್ದಿಗಳು ಶಿರಾಡಿ ಘಾಟ್ ನಲ್ಲಿ ಅಪಘಾತ: ಬಂಟ್ವಾಳ ಮೂಲದ ತಾಯಿ, ಮಗ ಮೃತ್ಯು

ಶಿರಾಡಿ ಘಾಟ್ ನಲ್ಲಿ ಅಪಘಾತ: ಬಂಟ್ವಾಳ ಮೂಲದ ತಾಯಿ, ಮಗ ಮೃತ್ಯು

ಸಕಲೇಶಪುರ: ಲಾರಿ ಮತ್ತು ಕಾರು ಡಿಕ್ಕಿಯಾಗಿ ತಾಯಿ-ಮಗ ಮೃತಪಟ್ಟ ಘಟನೆ ಶಿರಾಡಿ ಘಾಟ್ ನಲ್ಲಿ ನಡೆದಿದೆ.


ಮೃತರನ್ನು ಪಾಣೆಮಂಗಳೂರು ಸಮೀಪದ ಬೊಂಡಾಲ ನಿವಾಸಿ ಶಬೀರ್ ಎಂಬವರ ಪತ್ನಿ ಸಫಿಯಾ(50) ಮತ್ತು ಪುತ್ರ ಮುಹಮ್ಮದ್ ಶಫೀಕ್(20) ಎಂದು ಗುರುತಿಸಲಾಗಿದೆ.
ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರಿಗೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಂಟೈನರ್ ಲಾರಿ ಶಿರಾಡಿ ಘಾಟ್ ನ ಕೆಂಪುಹೊಳೆ ಸಮೀಪ ಢಿಕ್ಕಿ ಹೊಡೆದಿದೆ.


ಅನಾರೋಗ್ಯ (ಕ್ಯಾನ್ಸರ್)ದಿಂದ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಬೀರ್ ಅವರನ್ನು ಸಂದರ್ಶಿಸಿ, ಸಂಬಂಧಿಕರೋರ್ವರ ಮದುವೆ ಔತಣಕೂಟದಲ್ಲಿ ಭಾಗವಹಿಸಿ, ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

Join Whatsapp
Exit mobile version