Home ಟಾಪ್ ಸುದ್ದಿಗಳು ಇರಾನ್ ಅಧ್ಯಕ್ಷ ನಿಧನ: ರಾಷ್ಟ್ರಪತಿ ಭವನದಲ್ಲಿ ಅರ್ಧಕ್ಕೆ ಹಾರಾಡುತ್ತಿರುವ ರಾಷ್ಟ್ರಧ್ವಜ

ಇರಾನ್ ಅಧ್ಯಕ್ಷ ನಿಧನ: ರಾಷ್ಟ್ರಪತಿ ಭವನದಲ್ಲಿ ಅರ್ಧಕ್ಕೆ ಹಾರಾಡುತ್ತಿರುವ ರಾಷ್ಟ್ರಧ್ವಜ

ಹೊಸದಿಲ್ಲಿ: ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ಇರಾನ್ ಅಧ್ಯಕ್ಷ ಇಬ್ರಾಹಿಂ ರಯೀಸಿ ಅವರ ಗೌರವಾರ್ಥ ದೆಹಲಿ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗಿದೆ. ಈ ಮೂಲಕ ಅಗಲಿದ ಇರಾನ್ ಅಧ್ಯಕ್ಷರಿಗೆ ಗೌರವ ಸಲ್ಲಿಸಲಾಗಿದೆ.


ರವಿವಾರ ನಡೆದ ದುರಂತದಲ್ಲಿ ಇರಾನ್ ಅಧ್ಯಕ್ಷರು ಮಾತ್ರವಲ್ಲದೆ ದೇಶದ ವಿದೇಶ ಸಚಿವ ಹುಸೈನ್ ಆಮಿರ್ ಅಬ್ದುಲಹಿಯಾನ್ ಮತ್ತು ಆರು ಮಂದಿ ಇತರರು ಮೃತಪಟ್ಟಿದ್ದರು.

Join Whatsapp
Exit mobile version