Home ಟಾಪ್ ಸುದ್ದಿಗಳು ಅಲಹಾಬಾದ್: ಭೂಕಬಳಿಕೆ ಆರೋಪದಲ್ಲಿ ಸಂಸದ ಆಝಮ್ ಖಾನ್’ಗೆ ಜಾಮೀನು ಮಂಜೂರು

ಅಲಹಾಬಾದ್: ಭೂಕಬಳಿಕೆ ಆರೋಪದಲ್ಲಿ ಸಂಸದ ಆಝಮ್ ಖಾನ್’ಗೆ ಜಾಮೀನು ಮಂಜೂರು

ಅಲಹಾಬಾದ್: ಅಕ್ರಮ ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಹಿರಿಯ ಮುಖಂಡ, ಸಂಸದ ಆಝಮ್ ಖಾನ್’ಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಇದರ ಹೊರತಾಗಿ ಇತರ ಎರಡು ಪ್ರಕರಣದ ಜಾಮೀನು ಅರ್ಜಿ ವಿಚಾರಣೆ ಬಾಕಿಯಿರುವುದರಿಂದ ಆಝಮ್ ಖಾನ್ ಅವರು ಸೀತಾಪುರ ಜೈಲಿನಲ್ಲಿಯೇ ಕಳೆಯಬೇಕಾಗಿದೆ.

ಉತ್ತರ ಪ್ರದೇಶದಲ್ಲಿ ನಡೆದಿದ್ದ ಅಸೆಂಬ್ಲಿ ಚುನಾವಣೆಯ ಪ್ರಚಾರಕ್ಕಾಗಿ ಮಧ್ಯಂತರ ಜಾಮೀನು ಕೋರಿ ಆಝಾಮ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಸುಪ್ರೀಮ್ ಕೋರ್ಟ್ ನಿರಾಕರಿಸಿತ್ತು.

ಈ ಮಧ್ಯೆ ಅಸೆಂಬ್ಲಿ ಚುನಾವಣೆಯಲ್ಲಿ ಪ್ರಚಾರ ನಡೆಸದಂತೆ ತಡೆಯಲು ಸರ್ಕಾರ ಬಾಕಿ ಉಳಿದಿರುವ ಮೂರು ಜಾಮೀನು ಅರ್ಜಿಗಳ ವಿಚಾರಣೆಯನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಿದೆ ಎಂದು ಆಝಮ್ ಖಾನ್ ಸುಪ್ರೀಮ್ ಕೋರ್ಟ್ ಗೆ ಲಿಖಿತ ದೂರು ಸಲ್ಲಿಸಿದ್ದರು.

ಮೂರು ವಿಭಿನ್ನ ಪ್ರಕರಣಗಳಲ್ಲಿ ಉತ್ತರ ಪ್ರದೇಶ ನ್ಯಾಯಾಲಯದಲ್ಲಿ ಜಾಮೀನು ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಪ್ರಾಸಿಕ್ಯೂಷನ್ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ಉತ್ತರ ಪ್ರದೇಶ ಪೊಲೀಸರಿಂದ ಬಂಧಿಸಲ್ಪಟ್ಟ ಆಝಾಮ್ ಖಾನ್ ಅವರ ಪುತ್ರ, ಎಸ್ಪಿ ಮುಖಂಡ ಅಬ್ದುಲ್ಲಾ ಆಝಾಮ್ ಅವರು ಇತ್ತೇಚೆಗೆ ಸೀತಾಪುರ ಜೈಲಿನಿಂದ ಬಿಡುಗಡೆಯಾಗಿದ್ದರು. ಸದ್ಯ ಈತನ ವಿರುದ್ಧ 43 ಪ್ರಕರಣ ದಾಖಲಾಗಿದ್ದವು.

Join Whatsapp
Exit mobile version