Home ಟಾಪ್ ಸುದ್ದಿಗಳು ನ್ಯಾಷನಲ್ ವಿಮೆನ್ಸ್ ಫ್ರಂಟ್ ನಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ನ್ಯಾಷನಲ್ ವಿಮೆನ್ಸ್ ಫ್ರಂಟ್ ನಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಉಡುಪಿ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನ್ಯಾಷನಲ್ ವಿಮೆನ್ಸ್ ಫ್ರಂಟ್ ಉಡುಪಿ ಘಟಕದ ವತಿಯಿಂದ “ಮಹಿಳಾ ಸುರಕ್ಷತೆ ಕೇವಲ ಘೋಷಣೆಯಲ್ಲ ಅದು ಘನತೆಯ ಹಕ್ಕು” ಎಂಬ ಘೋಷಣೆಯೊಂದಿಗೆ ಉಡುಪಿಯ ಲಯನ್ಸ್ ಭವನದಲ್ಲಿ ವಿಶೇಷ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು N W F ರಾಜ್ಯ ಸಮಿತಿ ಸದಸ್ಯರಾದ ನಸೀಮಾ ಫಾತಿಮಾ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ಕೋಟೇಶ್ವರ ಗುರುಕುಲ್ ಪಬ್ಲಿಕ್ ಸ್ಕೂಲ್ ನ ಸಂಯೋಜಕರಾದ ವೈಶಾಲ ಶೆಟ್ಟಿ, M E T ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥರಾದ ಡಾ. ಜುಲೈದ ಸುಲ್ತಾನ, ಥೀಮ್ಸ್ ಬಾಟಿಕ್ಯು ಸಂಘಟನೆಯ ಸ್ಥಾಪಕರಾದ ರೇಷ್ಮಾ ಸೈಯದ್, ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆ ಕೆಮ್ಮನ್ನು ಇದರ ಪ್ರಾಂಶುಪಾಲರಾದ ಸಿಲ್ವಿಯನ್ A.C, N W F ಕರ್ನಾಟಕ ರಾಜ್ಯ ಉಪಾಧ್ಯಕ್ಷೆ ಸೈದಾ ಯೂಸುಫ್, ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಕಾರ್ಯದರ್ಶಿ ನಿದಾ ಆಫ್ರ ಭಾಗವಹಿಸಿ ತಮ್ಮ ವಿಚಾರಗಳನ್ನು ಮಂಡಿಸಿದರು.

N W F ಉಡುಪಿ ಜಿಲ್ಲಾಧ್ಯಕ್ಷೆ ರಹ್ಮತುನ್ನಿಸಾ ಸ್ವಾಗತಿಸಿ ಸಮ್ರಾನ ವಂದಿಸಿದರು.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp
Exit mobile version