Home ಟಾಪ್ ಸುದ್ದಿಗಳು ನ್ಯಾಷನಲ್ ವಿಮೆನ್ಸ್ ಫ್ರಂಟ್ ನಿಂದ ಹಕ್ಕುಗಳ ಸಂರಕ್ಷಣಾ Rally

ನ್ಯಾಷನಲ್ ವಿಮೆನ್ಸ್ ಫ್ರಂಟ್ ನಿಂದ ಹಕ್ಕುಗಳ ಸಂರಕ್ಷಣಾ Rally

ಹೊಸಂಗಡಿ: ಸ್ತ್ರೀ ಸುರಕ್ಷೆ ಕೇವಲ ಘೋಷಣೆಯಲ್ಲ; ಘನತೆ ಮತ್ತು ಗೌರವವಾಗಿದೆ ಎಂಬ ಘೋಷಣೆಯೊಂದಿಗೆ ನ್ಯಾಷನಲ್ ವಿಮೆನ್ಸ್ ಫ್ರಂಟ್ ಹೊಸಂಗಡಿ ಜಂಕ್ಷನ್ ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಿತು.

 ಹಕ್ಕುಗಳ ಸಂರಕ್ಷಣಾ Rally ಮತ್ತು ಸಾರ್ವಜನಿಕ ಸಭೆಯ ಅಧ್ಯಕ್ಷತೆಯನ್ನು NWF ಕಾಸರಗೋಡು ಜಿಲ್ಲಾಧ್ಯಕ್ಷರಾದ ಫೌಝಿಯಾ ಟೀಚರ್ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ನಫೀಸತ್ ಟೀಚರ್ ಸ್ವಾಗತಿಸಿದರು. ಉದ್ಘಾಟನೆಯನ್ನು NWF ಕೇರಳ ರಾಜ್ಯ ಕಾರ್ಯದರ್ಶಿ ಶಾಹಿನಾ ಕಣ್ಣೂರು ನೆರವೇರಿಸಿದರು.

  ಸಾಮಾಜಿಕ ಕಾರ್ಯಕರ್ತೆ ಸಿಸ್ಟರ್ ಜಯಾ ಆಂಟೋ, ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ ಜಿನ್ ಲೆವಿನ್ ಮೋಂತೆರೋ,  ವರ್ಕಾಡಿ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್, ವರ್ಕಾಡಿ ಪಂಚಾಯತ್ ಸದಸ್ಯೆ ಖಮರುನ್ನಿಸಾ ಮುಸ್ತಫಾ, ವಿಮನ್ ಇಂಡಿಯಾ ಮೂವ್ಮೆಂಟ್ ಜಿಲ್ಲಾ ಸಮಿತಿ ಸದಸ್ಯೆ ಶಾನಿದಾ ಹಾರಿಸ್, NWF ಮಂಜೇಶ್ವರ ಏರಿಯಾ ಕಾರ್ಯದರ್ಶಿ ಮಿಶ್ರಿಯಾ ಅಶ್ರಫ್ ಮಾತನಾಡಿದರು.

  NWF ಜಿಲ್ಲಾ ಸಮಿತಿ ಸದಸ್ಯೆ ಸುಮಯ್ಯಾ ಅಶ್ರಫ್ ಧನ್ಯವಾದ ಸಮರ್ಪಿಸಿದರು.

Join Whatsapp
Exit mobile version