Home ಕರಾವಳಿ ಅಲ್ಪಸಂಖ್ಯಾತರ ಮೇಲಿನ ದಾಳಿ ಸಂವಿಧಾನದ ಮೇಲೆ ನಡೆದ ದಾಳಿಗೆ ಸಮ: ಬಿ.ಕೆ. ಹರಿಪ್ರಸಾದ್

ಅಲ್ಪಸಂಖ್ಯಾತರ ಮೇಲಿನ ದಾಳಿ ಸಂವಿಧಾನದ ಮೇಲೆ ನಡೆದ ದಾಳಿಗೆ ಸಮ: ಬಿ.ಕೆ. ಹರಿಪ್ರಸಾದ್

ಮಂಗಳೂರು: ಅಲ್ಪಸಂಖ್ಯಾತರ ಮೇಲಿನ ದಾಳಿ ಸಂವಿಧಾನದ ಮೇಲೆ ನಡೆದ ದಾಳಿಗೆ ಸಮಾನವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.


ಮುಸ್ಲಿಮ್ ಸೆಂಟ್ರಲ್ ಕಮಿಟಿಯ ವತಿಯಿಂದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ರಾಜಕಾರಣಕ್ಕೆ ಬಂದ ಸಂದರ್ಭ ದ.ಕ.ಜಿಲ್ಲೆಯ ರಾಜಕಾರಣಿಗಳು ಸಹಕರಿಸಿದ್ದಾರೆ. ಜನಾರ್ದನ ಪೂಜಾರಿ, ಆಸ್ಕರ್ ಫೆರ್ನಾಂಡೀಸ್ ಅವರು ಸರಳ ಜೀವನ, ಸೇವಾ ಮನೋಭಾವದಲ್ಲಿ ರಾಜಕೀಯ ಜೀವನ ನಡೆಸಿದವರು. ಕಾಂಗ್ರೆಸ್ ನಲ್ಲಿ ಸರಳ ಜೀವನ ನಡೆಸಿದ ವ್ಯಕ್ತಿಗಳು. ದ.ಕ. ಸಂಸ್ಕೃತಿ ಹಾಗೂ ಸಂಸ್ಕಾರ ವಿರುವ ಜಿಲ್ಲೆ. ನಮ್ಮ ರಾಷ್ಟ್ರದಲ್ಲಿರುವ ಬಹುತ್ವವು ದ.ಕ.ಜಿಲ್ಲೆಯಲ್ಲಿದೆ ಎಂದರು.
ಸಂವಿಧಾನದ ಚೌಕಟ್ಟಿನಲ್ಲಿ ನಮ್ಮ ದೇಶ ನಡೆಯುತ್ತಿದೆ. ಕೇವಲ ಒಂದೇ ಧರ್ಮದವರು ಈ ದೇಶಕ್ಕೆ ಕೊಡುಗೆ ಕೊಟ್ಟಿಲ್ಲ. ಸಾವಿತ್ರಿ ಬಾಯಿ ಪುಲೇ ಫಾತಿಮಾ ಶೇಖ್ ಅವರ ಹೋರಾಟದ ಫಲವೇ ಇಂದು ಮಹಿಳೆಯರಿಗೆ ಶಿಕ್ಷಣ ಲಭ್ಯವಾಗಿದೆ ಎಂದರು.
ದ.ಕ.ಜಿಲ್ಲೆಯಲ್ಲಿ ಇಂದು ವಿದ್ಯಾರ್ಥಿಗಳಲ್ಲಿ ಯಾವ ರೀತಿಯ ವಿಷ ಬೀಜ ಬಿತ್ತಿದ್ದಾರೆ ಎಂದು ತಿಳಿದಿಲ್ಲ. ಇಂದು ಇಲ್ಲಿಯ ರಿಸಲ್ಟ್ 20ನೇ ಸ್ಥಾನಕ್ಕೆ ಕುಸಿದಿದೆ. ಜನರನ್ನು ತಪ್ಪು ದಾರಿಗೆಳೆಯಲು ಧರ್ಮ, ರಾಷ್ಟ್ರದ ಹೆಸರಿನಲ್ಲಿ ಎಲೆಯಲಾಗುತ್ತದೆ. ಪರಿಣಾಮ 20ನೇ ಸ್ಥಾನಕ್ಕೆ ಕುಸಿದಿದೆ.90ಶೇ ಮಂದಿ ಸರಕಾರ ಕೆಲಸವನ್ನು ಅವಲಂಬಿಸಿಲ್ಲ. ಅವರು ಸ್ವಂತ ಕಾಲ ಮೇಲೆ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಕೆಲವೊಂದು ಸಂಘಟನೆಗಳು ಸಮಾನತೆ, ಸರ್ವಧರ್ಮ ಸಮನ್ವಯತೆಯ ವಿರುದ್ಧವಿದೆ ಎಂದು ಹರಿಪ್ರಸಾದ್ ತಿಳಿಸಿದರು.


ಇವತ್ತೇನಾದರೂ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದರೆ, ಅದು ಸಂವಿಧಾನದ ಮೇಲೆ ನಡೆದ ದಾಳಿಯಂತಾಗುತ್ತದೆ. ದಲಿತರ ಮೇಲೆ ಅತ್ಯಾಚಾರ ನಡೆದರೆ ಅದು ಸಂವಿಧಾನದ ಮೇಲೆ ನಡೆದ ಅತ್ಯಾಚಾರವಾಗುತ್ತದೆ. ದ.ಕ.ಜಿಲ್ಲೆಯವರು ಹೊಟೇಲ್ ಉದ್ಯಮ, ಬ್ಯಾಂಕ್, ಸಹಾಕಾರಿ ಸಂಘವನ್ನು ಸ್ಥಾಪಿಸಿ ಸ್ವತಂತ್ರವಾಗಿ ಬದುಕು ಕಟ್ಟಿಕೊಂಡವರು. ಆದ್ದರಿಂದ ಯಾವುದೇ ಸಂಕುಚಿತ ಮನೋಭಾವ ಇರದೆ ಸತ್ಯ ಅಹಿಂಸೆಯ ಮೂಲಕ ಈ ದೇಶದ ಸಂವಿಧಾನವನ್ನು ರಕ್ಷಿಸುವ ಕಾರ್ಯ ಮಾಡಬೇಕಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿ ಸ್ವಂತ ಕಾಲ ಮೇಲೆ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ನಾವು ಜೊತೆಯಾಗಿ ನಿಂತು ಕೈಜೋಡಿಸಬೇಕು ಎಂದು ಹರಿಪ್ರಸಾದ್ ಹೇಳಿದರು.

ಕಾರ್ಯಕ್ರಮದಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆಎಸ್ ಮಸೂದ್, ವಿಧಾನಸಭೆ ವಿಪಕ್ಷ ಉಪನಾಯಕ ಯುಟಿ ಖಾದರ್, ಯೂಸುಫ್ ಖಾದರ್, ಇಬ್ರಾಹಿಂ ಕೋಡಿಜಾಲ್, ಮಾಜಿ ಮೇಯರ್ ಅಶ್ರಫ್, ಅಬ್ದುಲ್ ರವೂಫ್, ಶಶಿಧರ ಹೆಗ್ಡೆ, ಶಂಸುದ್ದೀನ್, ಮಾಜಿ ಮೇಯರ್ ಅಶ್ರಫ್ ಉಪಸ್ಥಿತಿ ಇದ್ದರು.

Join Whatsapp
Exit mobile version