ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಗಳ ನೇಮಲಾತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗ ಉದ್ಯೋಗ ಸೌಧ ಬೆಂಗಳೂರು ಇವರು ತಿದ್ದುಪಡಿ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಉಳಿಕೆ ಮೂಲ ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಉಲ್ಲೇಖಿತ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಹುದ್ದೆಗಳ ವಿವರ
ಪಿಡಿಒ ಉಳಿಕೆ ಮೂಲ ವೃಂದದ 150 ಹುದ್ದೆಗಳು
ಹೈದರಾಬಾದ್ ಕರ್ನಾಟಕ ವೃಂದದ 97 ಹುದ್ದೆಗಳು
ಒಟ್ಟು ಹುದ್ದೆಗಳು- 247
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ತೇರ್ಗಡೆಯಾದ ಅಭ್ಯರ್ಥಿಗಳು ಈ ಪಿಡಿಒ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಶುಲ್ಕ:
ಸಾಮಾನ್ಯ ವರ್ಗದ ಅಭ್ಯರ್ಥಿಗಳು- 600 ರೂ.
ಇತರೆ ಹಿಂದುಳಿದ ಅಭ್ಯರ್ಥಿಗಳು- 300 ರೂ.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ- 50 ರೂ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅಭ್ಯರ್ಥಿಗಳ ವಯೋಮಿತಿ
ಅರ್ಜಿ ಸಲ್ಲಿಸಲು ಕನಿಷ್ಠ-18 ವರ್ಷಗಳು ಪೂರ್ಣವಾಗಿರಬೇಕು.
ಸಾಮಾನ್ಯ ವರ್ಗದವರಿಗೆ- 35 ವರ್ಷಗಳು ಇದ್ದಿದ್ದನ್ನ 38 ವರ್ಷಗಳು ಮಾಡಲಾಗಿದೆ.
2ಎ, 2ಬಿ, 3ಎ, 3ಬಿ, 38- 38 ವರ್ಷಗಳು ಇರುವುದನ್ನ 41 ವರ್ಷಕ್ಕೆ ಏರಿಕೆ ಮಾಡಿದೆ.
ಎಸ್ಸಿ, ಎಸ್ಟಿ, ಪ್ರವರ್ಗ1- 40 ವರ್ಷ ಇದ್ದಿದ್ದನ್ನ 43 ವರ್ಷಕ್ಕೆ ಏರಿಸಲಾಗಿದೆ.
ಪಿಡಿಒ ಹುದ್ದೆಗೆ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ- ಸೆಪ್ಟೆಂಬರ್ 18, 2024 ಪಿಡಿಒ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ- ಅಕ್ಟೋಬರ್ 03, 2024
ಕೆಪಿಎಸ್ಸಿ ವೆಬ್ಸೈಟ್ https://www.kpsc.kar.nic.in/ ಭೇಟಿ ನೀಡಿ ಅಪ್ಲೇ ಮಾಡಬಹುದು.