ಮಂಗಳೂರು: ರಾಜ್ಯ, ಕೇಂದ್ರ ಸರ್ಕಾರಗಳಿಂದ ಜನತೆಗೆ ಹಲವು ಯೋಜನೆಗಳು ಲಭ್ಯವಿದೆ. ಕರ್ನಾಟಕ ಸರಕಾರ ಹಣ ಕಾಸಿನ ನೆರವಿನಿಂದ ಹಿಡಿದು, ಸಾಲ ಸೌಲಭ್ಯದವರೆಗೆ ವಿವಿಧ ಯೋಜನೆಗಳು ರಾಜ್ಯದ ಜನತೆಗೆ ನೆರವಾಗುತ್ತಿದೆ. ಆಯಾ ಯೋಜನೆಗಳಿಗೆ ಏನೆಲ್ಲಾ ದಾಖಲೆಗಳು ಬೇಕು ಎಂಬುದು ಹಲವರಿಗೆ ಗೊತ್ತಿಲ್ಲ. ಕೆಲವು ಯೋಜನೆಗಳಿಗೆ ಬೇಕಾಗುವ ದಾಖಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ವೃದ್ಧಾಪ್ಯ ವೇತನ:
ಬೇಕಾಗುವ ದಾಖಲೆಗಳು
-ವೈದ್ಯಕೀಯ ಪ್ರಮಾಣಪತ್ರ
-ಆಧಾರ್ ಕಾರ್ಡ್ ನಕಲು ಪ್ರತಿ
-ಪಡಿತರ ಚೀಟಿಯ ನಕಲು ಪ್ರತಿ
-ಮತದಾರರ ಗುರುತಿನ ಚೀಟಿ
-ಬ್ಯಾಂಕ್ ಪಾಸ್ ಬುಕ್
-ಐದು ಐಡೆಂಟಿಟಿ ಅಳತೆಯ ಪೋಟೋಗಳು
ಡಾ.ಬಿಆರ್ ಅಂಬೇಡ್ಕರ್ ನಗರ ವಸತಿ ಯೋಜನೆ:
ಬೇಕಾಗುವ ದಾಖಲೆಗಳು
-ಆಧಾರ್ ಕಾರ್ಡ್(ಕುಟುಂಬದ ಎಲ್ಲಾ ಸದಸ್ಯರದ್ದು)
- ಬಿಪಿಎಲ್ ಪಡಿತರ ಚೀಟಿ
-ಜಾತಿ ಪ್ರಮಾಣ ಪತ್ರ.
-ಆದಾಯ ಪ್ರಮಾಣಪತ್ರ
-ವೋಟರ್ ಐಡಿ
-ಬ್ಯಾಂಕ್ ಪಾಸ್ ಬುಕ್(ರಾಷ್ಟ್ರೀಕೃತ ಬ್ಯಾಂಕ್)
-ಎರಡು ಪೋಟೋ.
-ನಿವೇಶನ ಉಸ್ತುವಾರಿ ( ಫಾರಂ-2)
ಈ ಕೆಳಗಿನ ಯೋಜನೆಗಳಿಗೆ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಸೇವಾ ಕೇಂದ್ರಗಳಿಗೆ ತೆರಳಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಗೃಹ ಜ್ಯೋತಿ ಯೋಜನೆ:
ಬೇಕಾದ ದಾಖಲೆಗಳು
-ವಿದ್ಯುತ್ ಬಿಲ್
-ಆಧಾರ್ ಕಾರ್ಡ್
-ಮೊಬೈಲ್ ಜೊತೆಗೆ ತೆಗೆದುಕೊಂಡು ಹೋಗಬೇಕು.
ಗೃಹಲಕ್ಷ್ಮೀ ಯೋಜನೆ:
ಬೇಕಾದ ದಾಖಲೆಗಳು
-ಪಡಿತರ ಚೀಟಿ
-ಆಧಾರ್ ಕಾರ್ಡ್
-ಬ್ಯಾಂಕ್ ಪಾಸ್ ಬುಕ್ ( ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು)
-ಮೊಬೈಲ್ ಜೊತೆಗೆ ತೆಗೆದುಕೊಂಡು ಹೋಗಬೇಕು
ಅನ್ನಭಾಗ್ಯ ಯೋಜನೆ:
ಬೇಕಾದ ದಾಖಲೆಗಳು
-ಪಡಿತರ ಚೀಟಿ
-ಆಧಾರ್ ಕಾರ್ಡ್
-ಬ್ಯಾಂಕ್ ಪಾಸ್ ಬುಕ್ ( ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು)
-ಮೊಬೈಲ್ ಜೊತೆಗೆ ತೆಗೆದುಕೊಂಡು ಹೋಗಬೇಕು.
ಸಂಧ್ಯಾ ಸುರಕ್ಷತಾ ಯೋಜನೆ ( 65 ವರ್ಷ ಮೇಲ್ಪಟ್ಟವರಿಗೆ)
-ವೈದ್ಯಕೀಯ ಪ್ರಮಾಣಪತ್ರ
-ಆಧಾರ್ ಕಾರ್ಡ್ ನಕಲು ಪ್ರತಿ
-ಪಡಿತರಚೀಟಿ ನಕಲು ಪ್ರತಿ
-ಮತದಾರರ ಗುರುತಿನ ಚೀಟಿ ನಕಲು ಪ್ರತಿ
-ಬ್ಯಾಂಕ್ ಪಾಸ್ ಬುಕ್ ನಕಲು ಪ್ರತಿ
-ಐದು ಪೋಟೋ
ಅಂಗವಿಕಲ ಪೋಷಣಾ ಭತ್ಯೆ:
ಬೇಕಾದ ದಾಖಲೆಗಳು
-ಅಂಗವಿಕಲ ಪ್ರಮಾಣ ಪತ್ರ ( ಯುಡಿ ಐಡಿ ಕಾರ್ಡ್)
-ಆಧಾರ್ ಕಾರ್ಡ್ ನಕಲು ಪ್ರತಿ
-ಪಡಿತರ ಚೀಟಿ ನಕಲು ಪ್ರತಿ
-ಮತದಾರರ ಗುರುತಿನ ಚೀಟಿ ನಕಲು ಪ್ರತಿ
-ಬ್ಯಾಂಕ್ ಪಾಸ್ ಬುಕ್ ನಕಲು ಪ್ರತಿ
-ಐದು ಪೋಟೋ
ಪ್ರಧಾನಮಂತ್ರಿ ಅವಾಸ್ ಯೋಜನೆ:
ಬೇಕಾಗುವ ದಾಖಲೆಗಳು
-ಆಧಾರ್ ಕಾರ್ಡ್ ( ಕುಟುಂಬದ ಎಲ್ಲಾ ಸದಸ್ಯರು)
- ಬಿಪಿಎಲ್ ಪಡಿತರ ಚೀಟಿ
-ಜಾತಿ ಪ್ರಮಾಣಪತ್ರ
-ಆದಾಯ ಪ್ರಮಾಣ ಪತ್ರ
-ಚುನಾವಣಾ ಗುರುತಿನ ಚೀಟಿ
-ಬ್ಯಾಂಕ್ ಪಾಸ್ ಬುಕ್ (ರಾಷ್ಟ್ರೀಕೃತ ಬ್ಯಾಂಕ್)
-ಎರಡು ಪೋಟೋ
ಮನಸ್ವಿನಿ ಮೈತ್ರಿ ಯೋಜನೆ:
ಬೇಕಾದ ದಾಖಲೆಗಳು
-ವೈದ್ಯಕೀಯ ಪ್ರಮಾಣ ಪತ್ರ
-ಆಧಾರ್ ಕಾರ್ಡ್ ನಕಲು ಪ್ರತಿ
-ಪಡಿತರ ಚೀಟಿ ನಕಲು ಪ್ರತಿ
-ವೋಟರ್ ಐಟಿ ನಕಲು ಪ್ರತಿ
-ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಬುಕ್ ನಕಲು ಪ್ರತಿ
-ಐದು ಪೋಟೋ
ವಿಧವಾ ವೇತನ:
ಬೇಕಾದ ದಾಖಲೆಗಳು
-ಪತಿಯ ಮರಣ ಪ್ರಮಾಣ ಪತ್ರ
-ಆಧಾರ್ ಕಾರ್ಡ್ ನಕಲು ಪ್ರತಿ
-ರೇಷನ್ ಕಾರ್ಟ್ ನಕಲು ಪ್ರತಿ
-ಮತದಾರರ ಗುರುತಿನ ಚೀಟಿ ನಕಲು ಪ್ರತಿ
- ಬ್ಯಾಂಕ್ ಪಾಸ್ ಬುಕ್ ನಕಲು ಪ್ರತಿ
-ಐದು ಪೋಟೋ.
ವಾಜಪೇಯಿ ನಗರ ವಸತಿ ಯೋಜನೆ:
ಬೇಕಾಗುವ ದಾಖಲೆಗಳು
-ಆಧಾರ್ ಕಾರ್ಡ್ (ಕುಟುಂಬದ ಎಲ್ಲಾ ಸದಸ್ಯರು)
-ಪಡಿತರ ಚೀಟಿ ನಕಲು ಪ್ರತಿ
-ಜಾತಿ ಪ್ರಮಾಣಪತ್ರ
-ಆದಾಯ ಪ್ರಮಾಣಪತ್ರ
-ಚುನಾವಣಾ ಗುರುತಿನ ಚೀಟಿ
-ಬ್ಯಾಂಕ್ ಪಾಸ್ ಬುಕ್
-ಎರಡು ಪೋಟೋ