Home ರಾಷ್ಟ್ರೀಯ ರಾಂಗ್​ ಸೈಡ್​ನಿಂದ ಬಂದು ಬೈಕ್​ಗೆ​ ಡಿಕ್ಕಿ ಹೊಡೆದ ಕಾರು: ಸವಾರ ಸ್ಥಳದಲ್ಲೇ ಮೃತ್ಯು.!

ರಾಂಗ್​ ಸೈಡ್​ನಿಂದ ಬಂದು ಬೈಕ್​ಗೆ​ ಡಿಕ್ಕಿ ಹೊಡೆದ ಕಾರು: ಸವಾರ ಸ್ಥಳದಲ್ಲೇ ಮೃತ್ಯು.!

ನವದೆಹಲಿ: ಕಾರು ಚಾಲಕನೊಬ್ಬ ರಾಂಗ್ ಸೈಡ್​ನಲ್ಲಿ ಬಂದು ಬೈಕ್​ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ.

ಗುರುಗ್ರಾಮದ ಡಿಎಲ್​ಎಫ್ 2ನೇ ಹಂತದ ಗಾಲ್ಫ್​ ಕೋರ್ಸ್​ ರಸ್ತೆಯಲ್ಲಿ ಈ ಘಟನೆ ನಡೆದಿದೆ.

ನವದೆಹಲಿಯ ದ್ವಾರಕಾದ ಪೋಚನ್‌ಪುರದ ಅಕ್ಷತ್ ಗಾರ್ಗ್ ಎಂದು ಗುರುತಿಸಲಾದ ಬೈಕ್ ಸವಾರ ತನ್ನ ಬೈಕ್​ನಲ್ಲಿ ಹೆಲ್ಮೆಟ್ ಮತ್ತು ಕೈಗವಸು ಸೇರಿದಂತೆ ಎಲ್ಲವನ್ನೂ ಧರಿಸಿದ್ದ.ಆತನ ಸ್ನೇಹಿತ ಪ್ರದ್ಯುಮನ್ ಕುಮಾರ್ ಆತನ ಹಿಂದೆ ಮತ್ತೊಂದು ಮೋಟಾರ್ ಸೈಕಲ್​ನಲ್ಲಿ ಹೋಗುತ್ತಿದ್ದ. ಕುಮಾರ್ ತೆಗೆದ ಗೋಪ್ರೊ ಕ್ಯಾಮೆರಾದಲ್ಲಿ ಈ ಅಪಘಾತ ಸೆರೆಯಾಗಿದೆ.

17 ಸೆಕೆಂಡ್‌ಗಳ ವೀಡಿಯೊದಲ್ಲಿ ಗಾರ್ಗ್ ಅವರು ತಿರುವಿನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಕಾರೊಂದು ಬಂದು ಡಿಕ್ಕಿ ಹೊಡೆದಿದೆ. ಕೂಡಲೇ ಗಾರ್ಗ್​ ಸಾವನ್ನಪ್ಪಿದ್ದಾರೆ.

Join Whatsapp
Exit mobile version