Home ಕರಾವಳಿ ಪ್ರಯಾಣಿಕರಿಗೆ ಮತ್ತೊಂದು ಶಾಕ್: ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲು ತೀರ್ಮಾನ

ಪ್ರಯಾಣಿಕರಿಗೆ ಮತ್ತೊಂದು ಶಾಕ್: ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲು ತೀರ್ಮಾನ

0

ಉಡುಪಿ: ಸರಣಿ ಬೆಲೆ ಏರಿಕೆಗಳಿಂದ ತತ್ತರಿಸಿರುವ ಕರ್ನಾಟಕ ಜನತೆಗೆ ಶೀಘ್ರದಲ್ಲೇ ಮತ್ತೊಂದು ಶಾಕ್ ಎದುರಾಗಲಿದೆ.

ಇತ್ತೀಚೆಗಷ್ಟೇ ಕೆಎಸ್​ಆರ್​​ಟಿಸಿ ಬಸ್​ಗಳ ಪ್ರಯಾಣ ದರ ಪರಿಷ್ಕರಣೆ ಮಾಡಲಾಗಿತ್ತು. ಇದೀಗ ಖಾಸಗಿ ಬಸ್ ಸರದಿ. ರಾಜ್ಯದಾದ್ಯಂತ ಖಾಸಗಿ ಬಸ್​ಗಳ ಟಿಕೆಟ್ ದರ ಹೆಚ್ಚಳ ಮಾಡಲು ಖಾಸಗಿ ಬಸ್ ಮಾಲೀಕರ ಒಕ್ಕೂಟ ನಿರ್ಧರಿಸಿದೆ. ಈ ಬಗ್ಗೆ ಮುಂದಿನ ವಾರವೇ ಅಧಿಕೃತ ಪ್ರಕಟಣೆ ಪ್ರಕಟವಾಗುವ ಸಾಧ್ಯತೆ ಇದೆ.

ಹಾಲು, ವಿದ್ಯುತ್, ಮೆಟ್ರೋ, ಸರ್ಕಾರಿ ಬಸ್ ಟಿಕೆಟ್ ದರ ಹೀಗೆ ಎಲ್ಲವೂ ಏರಿಕೆಯಾಗಿದ್ದು, ಈ ಬಗ್ಗೆ ಜನ ಬೀದಿಗಿಳಿದು ಹೋರಾಡುತ್ತಿರುವಾಗಲೇ, ಸದ್ದಿಲ್ಲದೆ ಖಾಸಗಿ ಬಸ್ ಮಾಲೀಕರು ಟಿಕೆಟ್ ದರ ಏರಿಸಲು ನಿರ್ಧರಿಸಿದ್ದಾರೆ. ಡೀಸೆಲ್ ದರ ಏರಿಕೆ ಹಾಗೂ ಟೋಲ್ ದರ ಹೆಚ್ಚಳ ಹಿನ್ನೆಲೆಯಲ್ಲಿ, ಸರ್ಕಾರದ ತೀರ್ಮಾನಕ್ಕೆ ಕಾಯದೆ ತಾವೇ ದರ ಏರಿಸಲು ನಿರ್ಧರಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಪ್ರತಿ ಲೀಟರ್ ಡೀಸೆಲ್​ ದರ ಸುಮಾರು ಐದು ರೂಪಾಯಿ ಏರಿಕೆಯಾಗಿದೆ. ಟೋಲ್ ದರ ಕೂಡ ಹೆಚ್ಚಾಗಿದೆ. ದರ ಏರಿಸದಿದ್ದರೆ ಖಾಸಗಿ ಬಸ್ ಉದ್ಯಮ ಸ್ಥಗಿತಗೊಳ್ಳುತ್ತದೆ. ಪ್ರತಿ ಬಸ್​ ನಿರ್ವಹಣೆಗೆ ಸದ್ಯ 18 ರಿಂದ 20 ಸಾವಿರ ರೂಪಾಯಿ ಹೆಚ್ಚುವರಿ ಖರ್ಚು ಬರುತ್ತಿದೆ. ಹಾಗಾಗಿ ದರ ಏರಿಸುವುದು ಅನಿವಾರ್ಯ ಎಂದು ಬಸ್ ಮಾಲೀಕರ ಸಂಘದ ರಾಜ್ಯ ಪ್ರಮುಖರು ಹೇಳಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯ್ಕ ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version