Home ಟಾಪ್ ಸುದ್ದಿಗಳು ಮತ್ತೊಂದು ಐತಿಹಾಸಿಕ ದಾಖಲೆ: ಕೆರಿಬಿಯನ್ನರ ವಿರುದ್ಧ ಭಾರತಕ್ಕೆ ಸರಣಿ ಜಯ

ಮತ್ತೊಂದು ಐತಿಹಾಸಿಕ ದಾಖಲೆ: ಕೆರಿಬಿಯನ್ನರ ವಿರುದ್ಧ ಭಾರತಕ್ಕೆ ಸರಣಿ ಜಯ

ಕ್ವೀನ್ಸ್ ಪಾರ್ಕ್ ಓವಲ್: ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯವನ್ನೂ ಗೆದ್ದು 3-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿರುವ ಭಾರತ ತಂಡ ಐತಿಹಾಸಿಕ ಸಾಧನೆ ಮಾಡಿದೆ, ತಂಡವೊಂದರ ವಿರುದ್ಧ ಅತೀ ಹೆಚ್ಚು ಸತತ ಸರಣಿ ಜಯ ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಕ್ರಿಕೆಟ್ ತಂಡ ಪಾತ್ರವಾಗಿದೆ.

ಇಂದಿನ ಸರಣಿ ಜಯದ ಮೂಲಕ ಭಾರತದ ಖಾತೆಗೆ ವಿಂಡೀಸ್ ವಿರುದ್ಧ ಮತ್ತೊಂದು ಸರಣಿ ಜಯ ದಾಖಲಾಗಿದ್ದು, ಇದು ಭಾರತಕ್ಕೆ ವಿಂಡೀಸ್ ವಿರುದ್ಧ 12ನೇ ಸತತ ಸರಣಿ ಜಯವಾಗಿದೆ. ಒಂದು ಅಂತಾರಾಷ್ಟ್ರೀಯ ಕ್ರಿಕೆಟ್ ತಂಡವೊಂದರ ವಿರುದ್ಧ ಮತ್ತೊಂದು ತಂಡ ಸತತವಾಗಿ ಹೆಚ್ಚು ಸರಣಿ ಗೆದ್ದ ಪಟ್ಟಿಯಲ್ಲಿ ಭಾರತ ಇದೀಗ ಅಗ್ರ ಸ್ಥಾನಕ್ಕೇರಿದೆ. ವಿಂಡೀಸ್ ವಿರುದ್ಧದ ಭಾರತ ಸತತ ಜೈತ್ರಯಾತ್ರೆ 2007ರಲ್ಲಿ ಪ್ರಾರಂಭವಾಗಿತ್ತು. ಅಂದಿನಿಂದ ಇಂದಿನವರೆಗೂ ಅಜೇಯವಾಗಿ ಮುಂದುವರೆದಿದೆ.

ಈ ಹಿಂದೆ ಈ ಸ್ಥಾನದಲ್ಲಿ ಪಾಕಿಸ್ತಾನವಿತ್ತು. ಪಾಕಿಸ್ತಾನ ಜಿಂಬಾಬ್ವೆ ವಿರುದ್ಧ ಸತತ 11 ಸರಣಿಗಳಲ್ಲಿ ಜಯಗಳಿಸಿದೆ. 1996ರಿಂದ 2021ರವರೆಗೆ ಪಾಕ್ ಜಿಂಬಾಬ್ವೆ ವಿರುದ್ದ 11 ಸರಣಿಗಳನ್ನು ಗೆದ್ದು ಈ ಸಾಧನೆ ಮಾಡಿತ್ತು. ಇದೀಗ ಭಾರತ ತನ್ನ 12ನೇ ಸರಣಿ ಜಯದ ಮೂಲಕ ಈ ದಾಖಲೆಯನ್ನು ಹಿಂದಿಕ್ಕೆ ಅಗ್ರಸ್ಥಾನಕ್ಕೇರಿದೆ

ಇಂದಿನ ಜಯದೊಂದಿಗೆ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಸತತ 2 ಏಕದಿನ ಸರಣಿಗಳನ್ನು ಕ್ಲೀನ್ ಸ್ವೀಪ್ ಮಾಡಿದ ಸಾಧನೆ ಮಾಡಿದೆ. ಈ ಹಿಂದೆ ಭಾರತ ಪ್ರವಾಸ ಕೈಗೊಂಡಿದ್ದ ವಿಂಡೀಸ್ ತಂಡ ಆಗಲೂ 3-0 ಅಂತರದಲ್ಲಿ ವೈಟ್ ವಾಶ್ ಮುಖಭಂಗ ಅನುಭವಿಸಿತ್ತು. ಇದೀಗ ತವರಿನಲ್ಲಿಯೇ ಭಾರತದ ಎದುರು ಮತ್ತೆ ವೈಟ್ ವಾಶ್ ಆಗಿ ಮುಖಭಂಗಕ್ಕೀಡಾಗಿದೆ.

Join Whatsapp
Exit mobile version