ಬಿಜೆಪಿಗೆ ದುರಹಂಕಾರ ಎಂದು ಟೀಕಿಸಿದ ಆರ್ ಎಸ್ ಎಸ್ ನಾಯಕ ಯು-ಟರ್ನ್

Prasthutha|

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ 2014 ಮತ್ತು 2019ರ ಚುನಾವಣೆಗಿಂತಲೂ ಹೀನಾಯ ಪ್ರದರ್ಶನ ನೀಡಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಆರ್ ಎಸ್ ಎಸ್ ನಾಯಕ ಇಂದ್ರೇಶ್ ಕುಮಾರ್, ತನ್ನ ಭಕ್ತರಾದರೂ ದುರಹಂಕಾರ ಹೊಂದಿದ್ದವರಿಗೆ ರಾಮನು 241 ಸ್ಥಾನ ಬರುವಂತೆ ಮಾಡಿದನು. ರಾಮನ ಮೇಲೆ ನಂಬಿಕೆ ಇಲ್ಲದವರಿಗೆ 234 ಸ್ಥಾನಗಳನ್ನು ಮಾತ್ರ ನೀಡಿದನು. ಇದು ದೇವರ ನ್ಯಾಯ ಎಂದು ಹೇಳಿಕೆ ನೀಡಿದ್ದರು.
ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬಿಜೆಪಿಯನ್ನು ಟೀಕಿಸಿದ ಮರುದಿನವೇ ಇಂದ್ರೇಶ್ ಕುಮಾರ್ ಕೂಡ ಬಿಜೆಪಿ ವಿರುದ್ಧ ಹೇಳಿಕೆ ನೀಡಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು.

- Advertisement -


ತಮ್ಮ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿರುವ ಆರ್ ಎಸ್ ಎಸ್ ಮುಖಂಡ ಇಂದ್ರೇಶ್ ಕುಮಾರ್, ರಾಮನನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಿ, ಮಂದಿರ ನಿರ್ಮಾಣಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಸರ್ಕಾರ ರಚಿಸಿದ್ದಾರೆ ಎಂದು ಹೇಳಿದ್ದಾರೆ.


ಲೋಕಸಭೆ ಚುನಾವಣೆಯಲ್ಲಿ ಸ್ವಂತವಾಗಿ ಸಂಪೂರ್ಣ ಬಹುಮತವನ್ನು ಗೆಲ್ಲಲು ಸಾಧ್ಯವಾಗದ ಆಡಳಿತ ಪಕ್ಷದ ವೈಫಲ್ಯಕ್ಕೆ ಅದರ ಅಹಂಕಾರವೇ ಕಾರಣ ಎಂದಿದ್ದರು.
“ರಾಮನ ಭಕ್ತಿ ಮಾಡಿದವರು ಕ್ರಮೇಣ ದುರಹಂಕಾರಿಯಾದರು. ಆ ಪಕ್ಷವನ್ನು ಅತಿದೊಡ್ಡ ಪಕ್ಷವೆಂದು ಘೋಷಿಸಲಾಯಿತು. ಆದರೆ ದುರಹಂಕಾರದ ಕಾರಣದಿಂದ ರಾಮನು 241ಕ್ಕೆ ನಿಲ್ಲಿಸಿದನು” ಎಂದು ಅವರು ಹೇಳಿದ್ದರು. ಇದು ಬಿಜೆಪಿಗೆ ತೀವ್ರ ಮುಜುಗರ ಉಂಟುಮಾಡಿತ್ತು.

Join Whatsapp
Exit mobile version