Home ಟಾಪ್ ಸುದ್ದಿಗಳು ಆಂಧ್ರ ರೈಲು ಅಪಘಾತ: ರೈಲ್ವೆ ನಿದ್ರೆಯಿಂದ ಎದ್ದೇಳುವುದು ಯಾವಾಗೆಂದು ಕೇಳಿದ ಮಮತಾ ಬ್ಯಾನರ್ಜಿ

ಆಂಧ್ರ ರೈಲು ಅಪಘಾತ: ರೈಲ್ವೆ ನಿದ್ರೆಯಿಂದ ಎದ್ದೇಳುವುದು ಯಾವಾಗೆಂದು ಕೇಳಿದ ಮಮತಾ ಬ್ಯಾನರ್ಜಿ

ಕೊಲ್ಕತ್ತಾ: ಆಂಧ್ರ ಪ್ರದೇಶದಲ್ಲಿ ನಡೆದ ರೈಲು ಅಪಘಾತದಲ್ಲಿ ಇದುವರೆಗೆ ಕನಿಷ್ಠ 13 ಸಾವುಗಳು ಮತ್ತು ಕನಿಷ್ಠ 50 ಮಂದಿ ಗಾಯಗೊಂಡಿದ್ದಾರೆ. ಈ ಕುರಿತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರೈಲ್ವೆ ನಿದ್ರೆಯಿಂದ ಯಾವಾಗ ಹೊರಬರುತ್ತವೆ ಎಂದು ಪ್ರಶ್ನಿಸಿದ್ದಾರೆ.

ಎಕ್ಸ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಮಮತಾ ಬ್ಯಾನರ್ಜಿ, ರೈಲುಗಳ ನಡುವೆ ಮುಂಭಾಗದಲ್ಲಿ ಘರ್ಷಣೆಗಳು, ಬೋಗಿಗಳ ಹಳಿತಪ್ಪುವಿಕೆ, ಅಸಹಾಯಕ ಪ್ರಯಾಣಿಕರು ಬೋಗಿಗಳಲ್ಲಿ ಸಿಕ್ಕಿಹಾಕಿಕೊಂಡು ಬಲಿಯಾಗುತ್ತಿದ್ದಾರೆ. ಇದು ಅತ್ಯಂತ ದುರದೃಷ್ಟಕರ, ಆದರೆ ಇಂತಹದ್ದು ಮತ್ತೆ ಮತ್ತೆ ಮರುಕಳಿಸುತ್ತಿವೆ ಎಂದು ಹೇಳಿದ್ದಾರೆ. ಮೃತರ ಸಂಬಂಧಿಕರಿಗೆ ಸಂತಾಪ ಸೂಚಿಸಿರುವ ಮಮತಾ ಬ್ಯಾನರ್ಜಿ, ಘಟನೆ ಹಿನ್ನೆಲೆಯಲ್ಲಿ ಹೆಚ್ಚಿನ ತ್ವರಿತ ರಕ್ಷಣಾ ಕ್ರಮ ಕೈಗೊಳ್ಳಬೇಕು ಮತ್ತು ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

Join Whatsapp
Exit mobile version