ಢಾಕಾ: ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಬೃಹತ್ ಪ್ರತಿಭಟನೆ ನಡೆಸಲಾಗಿದೆ. ರಾಜಧಾನಿ ಢಾಕಾದಲ್ಲಿ ಲಕ್ಷಕ್ಕೂ ಹೆಚ್ಚಿನ ಬೆಂಬಲಿಗರನ್ನು ಸೇರಿಸಿದ ಪ್ರತಿಪಕ್ಷ BNP ವತಿಯಿಂದ ಈ ಪ್ರತಿಭಟನೆ ನಡೆಸಲಾಗಿತ್ತು.
ನೆನ್ನೆ ನಡೆದ ಈ ಬೃಹತ್ ಪ್ರತಿಭಟನೆ ಹಿಂಸಾತ್ಮಕವಾಗಿ ಮಾರ್ಪಾಡಾಗಿದ್ದು, BNP ಪಕ್ಷದ ಹಿರಿಯ ನಾಯಕ ಮಿರ್ಜಾ ಫಕ್ಲುರ್ ಇಸ್ಲಾಂ ಅಲಂಗೀರ್ ಅವರನ್ನ ಬಂಧಿಸಲಾಗಿದೆ. ಪ್ರತಿಭಟನೆಯಲ್ಲಿ ಪೊಲೀಸ್ ಬೂತ್‌ಗಳಿಗೆ ಬೆಂಕಿ ಹಚ್ಚಲಾಗಿದೆ. ಮುಖ್ಯ ನ್ಯಾಯಧೀಶರ ನಿವಾಸಕ್ಕೆ ಕಲ್ಲು ಎಸೆಯಲಾಗಿದೆ. ಹಲವು ವಾಹನಗಳನ್ನ ಡ್ಯಾಮೇಜ್ ಮಾಡಲಾಗಿದೆ. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪ್ಯಾರಾಮಿಲಿಟರಿ ಪಡೆಯನ್ನು ನಿಯೋಜಿಸಲಾಗಿದೆ. ಜೊತೆಗೆ ಮಿರ್ಜಾ ಫಕ್ಲುರ್ ಇಸ್ಲಾಂ ಅಲಂಗೀರ್ ಅವರನ್ನ ಬಂಧಿಸಲಾಗಿದೆ.
ಕಳೆದ 15 ವರ್ಷಗಳಿಂದ ಶೇಖ್ ಹಸೀನಾ ಬಾಂಗ್ಲಾದೇಶದ ಪ್ರಧಾನ ಮಂತ್ರಿಯಾಗಿದ್ದಾರೆ. ಆದ್ರೆ ತೀವ್ರ ಹಣದುಬ್ಬರದಿಂದ ದೇಶ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಅವರು ಅಧಿಕಾರದಿಂದ ಕೆಳಗಿಳಿಯ ಬೇಕು ಎಂದು ಅಲ್ಲಿನ ವಿಪಕ್ಷಗಳು ಒತ್ತಾಯ ಮಾಡಿ ಬೀದಿಗಿಳಿದಿವೆ.