ದಾವಣಗೆರೆ: ಸಿಎಂ ಸಿದ್ದರಾಮಯ್ಯ ಬಗ್ಗೆ ಇನ್ನೊಮ್ಮೆ ಈ ರೀತಿ ಏಕವಚನದಲ್ಲಿ ಮಾತಾಡಿದರೆ ಸಂಸದ ಅನಂತಕುಮಾರ ಹೆಗಡೆ ಎಲ್ಲಿ ಸಿಗುತ್ತಾರೆ ಅಲ್ಲಿ ಹಿಡಿದು ಹೊಡೆಯಲಾಗುವುದು ಎಂದು ಕಾಂಗ್ರೆಸ್ ಮಾಜಿ ಶಾಸಕ ಎಸ್.ರಾಮಪ್ಪ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಆರೋಗ್ಯ ಸರಿಯಿಲ್ಲ ಅಂತಾ ಹೆಗಡೆ ಮನೆಯಲ್ಲಿ ಮಲಗಿದ್ದರು. ಚುನಾವಣೆ ಹಿನ್ನೆಲೆ ಕೋಮುಭಾವನೆ ಕೆರಳಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಬಿಜೆಪಿಯ ಹಲವರು ಜೈಲಿಗೆ ಹೋಗಿದ್ದಾರೆ, ಅವರ ಬಗ್ಗೆ ಮಾತನಾಡಲಿ. ಸಿಎಂ ಸಿದ್ದರಾಮಯ್ಯ ಹಸಿದ ಜನರಿಗೆ ಅನ್ನ ಕೊಟ್ಟಿದ್ದಾರೆ. ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದರೂ ಯಾವುದೇ ಕಪ್ಪುಚುಕ್ಕೆ ಇಲ್ಲ. ಅವರ ಬಗ್ಗೆ ಮಾತನಾಡಲು ಹೆಗಡೆ ಯೋಗ್ಯತೆ ಏನು ಎಂದು ಪ್ರಶ್ನಿಸಿದ್ದಾರೆ.