Home ಟಾಪ್ ಸುದ್ದಿಗಳು ಪಿಎಂ ಕೇರ್ಸ್ ನಿಧಿಯಡಿ ಸಂಗ್ರಹವಾದ ಮೊತ್ತ ಬಹಿರಂಗಪಡಿಸಲಿ: ಅಖಿಲೇಶ್ ಯಾದವ್

ಪಿಎಂ ಕೇರ್ಸ್ ನಿಧಿಯಡಿ ಸಂಗ್ರಹವಾದ ಮೊತ್ತ ಬಹಿರಂಗಪಡಿಸಲಿ: ಅಖಿಲೇಶ್ ಯಾದವ್

ಲಖನೌ: 2020–21ರಲ್ಲಿ ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಪಿ.ಎಂ ಕೇರ್ಸ್ ನಿಧಿಯಡಿಯಲ್ಲಿ ಸಂಗ್ರಹವಾದ ಒಟ್ಟು ಮೊತ್ತವನ್ನು ಕೂಡ ಕೇಂದ್ರ ಸರ್ಕಾರ ಬಹಿರಂಗಪಡಿಸಬೇಕು ಎಂದು ಸಮಾಜವಾದಿ ಪಕ್ಷದ (ಎಸ್ ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಒತ್ತಾಯಿಸಿದ್ದಾರೆ.


ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಚುನಾವಣಾ ಬಾಂಡ್ಗಳ ಅಕ್ರಮ ಮತ್ತು ತಕ್ಷಣದ ರದ್ದತಿ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಪ್ರಜಾಪ್ರಭುತ್ವದ ಪುನಶ್ಚೇತನಕ್ಕೆ ಸ್ವಾಗತಾರ್ಹ ನಿರ್ಧಾರವಾಗಿದೆ. ಇದು ಬಿಜೆಪಿಯ ಭ್ರಷ್ಟಾಚಾರ, ಕಾನೂನುಬಾಹಿರ ನೀತಿಗಳನ್ನು ಬಹಿರಂಗಪಡಿಸುತ್ತದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.


ಪಿಎಂ ಕೇರ್ಸ್ ಫಂಡ್ ಹಾಗೂ ಬಿಜೆಪಿ ಸಂಗ್ರಹಿಸಿರುವ ಹಲವು ರೀತಿಯ ದೇಣಿಗೆಗಳ ಕುರಿತಾದ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಆದರೆ, ದೇಣಿಗೆ ವಿಚಾರದಲ್ಲಿ ಬಿಜೆಪಿ ಮೌನವಹಿಸಿರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

Join Whatsapp
Exit mobile version