ಬೆಂಗಳೂರು: ಕನ್ನಡ ಬಾವುಟದಲ್ಲಿ ಒಳ ಉಡುಪುಗಳನ್ನು ತಯಾರಿಸಿ ಅಮೆಜಾನ್ ಆನ್ ಲೈನ್ ಶಾಪಿಂಗ್ ವೆಬ್ ಸೈಟ್ ನಲ್ಲಿ ಮಾರಾಟ ಮಾಡುವ ಮೂಲಕ ಕನ್ನಡಕ್ಕೆ ಅವಮಾನ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ, ಗೂಗಲ್ ಬಳಿಕ ಇದೀಗ ಅಮೆಜಾನ್ ನಿಂದಲೂ ಕನ್ನಡಕ್ಕೆ ಅವಮಾನವಾಗಿದ್ದು, ಬಾವುಟದ ಬಣ್ಣದಲ್ಲಿ ಮಹಿಳೆಯರ ಒಳ ಉಡುಪು ತಯಾರಿಸಿ ಅದರ ಮೇಲೆ ಕನ್ನಡ ಧ್ವಜ ಲಾಂಛನ, ಭಾರತದ ಅಶೋಕ ಚಕ್ರ, ಬಳಕೆ ಮಾಡಲಾಗಿದೆ. ಈ ಮೂಲಕ ಕನ್ನಡಿಗರಿಗೆ ಅಮೆಜಾನ್ ಕಂಪನಿಯಿಂದ ಅವಮಾನ ಆಗಿದೆ. ಇದು ಕನ್ನಡಿಗರಿಗೆ ನೋವುಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮೆಜಾನ್ ಕೂಡಲೇ ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಮುಖ್ಯಮಂತ್ರಿಗಳು, ಗೃಹ ಸಚಿವರು ಇಂತಹ ದುಷ್ಟ ಶಕ್ತಿಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.