Home ಟಾಪ್ ಸುದ್ದಿಗಳು ಠಾಣೆಯಲ್ಲೇ ಪೊಲೀಸ್​ ಅಧಿಕಾರಿ ಆತ್ಮಹತ್ಯೆ!

ಠಾಣೆಯಲ್ಲೇ ಪೊಲೀಸ್​ ಅಧಿಕಾರಿ ಆತ್ಮಹತ್ಯೆ!

ಹೊಸದಿಲ್ಲಿ :  ಪೊಲೀಸ್​ ಅಧಿಕಾರಿಯೊಬ್ಬರು ಠಾಣೆಯಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿಯನ್ನು ಪೂರ್ವ ದೆಹಲಿಯ ಪಾಂಡವನಗರ ಪೊಲೀಸ್​ ಠಾಣೆಯ ಸಬ್​ಇನ್ಸ್​ಪೆಕ್ಟರ್ ರಾಹುಲ್ ಸಿಂಗ್​ (31) ಎಂದು ಗುರುತಿಸಲಾಗಿದೆ.

ಆಗ್ರಾ ಮೂಲದವರಾದ ರಾಹುಲ್​ ಸಿಂಗ್, ಐದು ತಿಂಗಳ ಹಿಂದೆಯಷ್ಟೇ ವಿವಾಹಿತರಾಗಿದ್ದು, ತಮ್ಮ ಕುಟುಂಬದೊಂದಿಗೆ ದೆಹಲಿಯಲ್ಲೇ ವಾಸವಾಗಿದ್ದರು. ಎಂದಿನಂತೆ ಕೆಲಸಕ್ಕೆ ಹಾಜರಾದ ಸಿಂಗ್, ಠಾಣೆಯಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಹಿರಿಯ ಅಧಿಕಾರಿಗಳ ಶೋಷಣೆಯೇ ರಾಹುಲ್ ಸಿಂಗ್ ಆತ್ಮಹತ್ಯೆಗೆ ಕಾರಣ ಎಂಬುದು ಕುಟುಂಬಸ್ಥರ ಆರೋಪವಾಗಿದ್ದು, ಈ ಹಿನ್ನೆಲೆಯಲ್ಲಿ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ರಾಹುಲ್ ಸಿಂಗ್ ಕುಟುಂಬಸ್ಥರು ಆಗ್ರಹಿಸಿದ್ದಾರೆ.

Join Whatsapp
Exit mobile version