ಮಂಗಳೂರು: ತನ್ನ ಪುಟ್ಟ ಮಗುವಿನೊಂದಿಗೆ ಸೇತುವೆ ಮೇಲಿನಿಂದ ನದಿಗೆ ಹಾರಿ ಆತ್ಮಹತ್ಯೆ ಗೆ ಯತ್ನಿಸಿದ ತಂದೆ, ಮಗುವನ್ನು ಸ್ಥಳೀಯ ಮುಸ್ಲಿಮ್ ಯುವಕರು ರಕ್ಷಿಸಿದ ಘಟನೆ ನಗರದ ಹೊರ ವಲಯದ ಗುರುಪುರದಲ್ಲಿ ನಡೆದಿದೆ.
ಕೈಕಂಬ ನಿವಾಸಿ ಸಂದೀಪ್ ಪೂಜಾರಿ ಅತ್ಮಹತ್ಯೆಗೆ ಯತ್ನಿಸಿದ ಯುವಕ ಎಂದು ತಿಳಿದು ಬಂದಿದೆ.
ಪತ್ನಿಯೊಂದಿಗಿನ ವಿರಸದ ಹಿನ್ನೆಲೆಯಲ್ಲಿ ಸಂದೀಪ್ ತನ್ನ ಎರಡು ವರ್ಷದ ಮಗುವಿನೊಂದಿಗೆ ಗುರುಪುರದ ಫಲ್ಗುಣಿ ಸೇತುವೆ ಮೇಲಿನಿಂದ ನದಿಗೆ ಜಿಗಿಯಲು ಯತ್ನಿಸಿದ್ದ. ಸ್ಥಳೀಯ ಯುವಕರು ಮನವೊಲಿಸಿದರೂ ಆತ ಕೇಳಲು ಸಿದ್ಧನಿರಲಿಲ್ಲ. ಕೊನೆಗೂ ಸ್ಥಳೀಯ ಮುಸ್ಲಿಮ್ ಯುವಕರು ಆತನನ್ನು ಹಿಡಿದು ರಕ್ಷಿಸಿದ್ದಾರೆ.