Home ಟಾಪ್ ಸುದ್ದಿಗಳು ಕೋಮುವಾದವನ್ನು ನಿರಾಕರಿಸದಿದ್ದರೆ ಠಾಗೋರ್, ನೇತಾಜಿ ಉತ್ತರಾಧಿಕಾರಿಗಳಾಗಲು ಸಾಧ್ಯವಿಲ್ಲ : ಅಮರ್ತ್ಯ ಸೇನ್

ಕೋಮುವಾದವನ್ನು ನಿರಾಕರಿಸದಿದ್ದರೆ ಠಾಗೋರ್, ನೇತಾಜಿ ಉತ್ತರಾಧಿಕಾರಿಗಳಾಗಲು ಸಾಧ್ಯವಿಲ್ಲ : ಅಮರ್ತ್ಯ ಸೇನ್

ಕೊಲ್ಕತಾ : ಕೋಮುವಾದವನ್ನು ನಿರಾಕರಿಸದಿದ್ದರೆ ನಾವು ಠಾಗೋರ್ ಮತ್ತು ನೇತಾಜಿಯವರ ನಿಜವಾದ ವಾರಿಸುದಾರರಾಗಲು ಸಾಧ್ಯವಿಲ್ಲ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಕೋಮುಧ್ರುವೀಕರಣ ರಾಜಕಾರಣವನ್ನು ಉಲ್ಲೇಖಿಸಿ ಅವರು ಮಾತನಾಡಿದ್ದಾರೆ.

ಜಾತ್ಯತೀತ ಪಕ್ಷಗಳು ತಮ್ಮ ವಿಸ್ತೃತ ಕಾರ್ಯಕ್ರಮಗಳಲ್ಲಿ ಭಿನ್ನತೆ ಹೊಂದಿರಬಹುದು. ಆದರೆ ಕೋಮುವಾದದ ನಿರಾಕರಣೆ ಅವುಗಳ ಬಲವಾದ ಮೌಲ್ಯವಾಗಿರಬೇಕು. ರಾಜ್ಯವನ್ನು ಜಾತ್ಯತೀತವನ್ನಾಗಿ ಉಳಿಸುವಲ್ಲಿ ಎಡಪಕ್ಷಗಳ ಜವಾಬ್ದಾರಿ ಟಿಎಂಸಿಗಿಂತ ಕಡಿಮೆಯೇನಿಲ್ಲ ಎಂದು ಅವರು ಹೇಳಿದ್ದಾರೆ.

ಬಂಗಾಳ ಈ ಹಿಂದೆ ಕೋಮುವಾದದಿಂದ ತುಂಬಾ ಹಾನಿಗೊಳಗಾದುದನ್ನು ಅವರು ಸ್ಮರಿಸಿದ್ದಾರೆ.

ರವೀಂದ್ರನಾಥ್ ಠಾಗೋರ್, ನೇತಾಜಿ ಸುಭಾಶ್ಚಂದ್ರ ಬೋಸ್, ಈಶ್ವರ್ ಚಂದ್ರ ವಿದ್ಯಾಸಾಗರ್, ಸ್ವಾಮಿ ವಿವೇಕಾನಂದ ಮುಂತಾದ ಎಲ್ಲರೂ ಒಗ್ಗಟ್ಟಿನ ಬಂಗಾಳಿ ಸಂಸ್ಕೃತಿಯ ಬಗ್ಗೆ ಪ್ರತಿಪಾದಿಸಿದ್ದರು ಮತ್ತು ಬಯಸಿದ್ದರು. ಅವರ ಸಾಮಾಜಿಕ ಉದ್ದೇಶಗಳಲ್ಲಿ ಒಂದು ಸಮುದಾಯವನ್ನು ಇನ್ನೊಂದು ಸಮುದಾಯದ ವಿರುದ್ಧ ಪ್ರಚೋದಿಸುವುದಕ್ಕೆ ಅವರಲ್ಲಿ ಅವಕಾಶವೇ ಇರಲಿಲ್ಲ ಎಂದು ಅವರು ಹೇಳಿದ್ದಾರೆ.  

Join Whatsapp
Exit mobile version