Home ಟಾಪ್ ಸುದ್ದಿಗಳು ಅಪಾರ್ಟ್‌’ಮೆಂಟ್ ಮೇಲಿನಿಂದ ಬಿದ್ದು ಗಗನಸಖಿ ಶಂಕಾಸ್ಪದ ‌ಸಾವು

ಅಪಾರ್ಟ್‌’ಮೆಂಟ್ ಮೇಲಿನಿಂದ ಬಿದ್ದು ಗಗನಸಖಿ ಶಂಕಾಸ್ಪದ ‌ಸಾವು

ಬೆಂಗಳೂರು: ಗೆಳೆಯನನ್ನು ಭೇಟಿಯಾಗಲು ದುಬೈನಿಂದ ಬಂದಿದ್ದ ಯುವತಿಯೊಬ್ಬಳು ಅಪಾರ್ಟ್‌ ಮೆಂಟ್ ಮೇಲಿನಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಿನ್ನೆ ಮಧ್ಯರಾತ್ರಿ ಕೋರಮಂಗಲದ 8ನೇ ಬ್ಲಾಕ್​ನಲ್ಲಿ ನಡೆದಿದೆ.

ರೇಣುಕಾ ರೆಸಿಡೆನ್ಸಿ ಅಪಾರ್ಟ್ಮೆಂಟ್​ ನ ನಾಲ್ಕನೇ ಮಹಡಿಯಿಂದ ಬಿದ್ದು ಅರ್ಚನಾ ಧಿಮಾನ್ (28) ಸಾವನ್ನಪ್ಪಿದ್ದಾರೆ.

ಹಿಮಾಚಲ ಪ್ರದೇಶ ಮೂಲದ ಅರ್ಚನಾ ಧಿಮಾನ್ ಪ್ರತಿಷ್ಠಿತ ಏರ್​ ಲೈನ್ಸ್ ​ನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದು ನಗರದಲ್ಲಿನ ತನ್ನ ಸ್ನೇಹಿತ ಆದೇಶ್​ ನನ್ನು ಭೇಟಿಯಾಗಲು ನಿನ್ನೆ ದುಬೈನಿಂದ ಬಂದಿದ್ದರು.

ಕೇರಳ ಮೂಲದ ಆದೇಶ್ ನಗರದ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ತಡರಾತ್ರಿ 12 ಗಂಟೆ ಸುಮಾರಿಗೆ ಅಪಾರ್ಟ್ಮೆಂಟ್ ​ನ ನಾಲ್ಕನೇ ಮಹಡಿಯಿಂದ ಬಿದ್ದ ಪರಿಣಾಮ ಅರ್ಚನಾ ಸಾವನ್ನಪ್ಪಿದ್ದಾರೆ.

ಕೆಲವು ವರ್ಷಗಳಿಂದ ಅರ್ಚನಾ ಹಾಗೂ ಆದೇಶ್ ಪರಸ್ಪರ ಪ್ರೀತಿಸುತ್ತಿದ್ದರು. ನಿನ್ನೆ ನಗರಕ್ಕೆ ಗೆಳೆಯನನ್ನು ಭೇಟಿಯಾಗಲು ಬಂದಾಗ ಘಟನೆ ನಡೆದಿದೆ. ತಡರಾತ್ರಿ ಇಬ್ಬರ ನಡುವೆ ಏನಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಅಪಾರ್ಟ್‌ ಮೆಂಟ್ ಸೇರಿದಂತೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ

Join Whatsapp
Exit mobile version