ಚೆನ್ನೈ: 32 ವರ್ಷದ ವ್ಯಕ್ತಿಯೋರ್ವ ಬಿರಿಯಾನಿ ಜೊತೆಗೆ 1.45 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ನುಂಗಿರುವ ಘಟನೆ ಚೆನ್ನೈನಲ್ಲಿ ನಡೆದಿದ್ದು, ವ್ಯಕ್ತಿಯ ಹೊಟ್ಟೆಯಲ್ಲಿದ್ದ ಆಭರಣಗಳನ್ನು ಹೊರ ತೆಗೆಯಲು ವೈದ್ಯರು ಯಶಸ್ವಿಯಾಗಿದ್ದಾರೆ
ಆಭರಣದ ಅಂಗಡಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೋರ್ವ ಮೇ 3ರಂದು ಈದ್ ಪ್ರಯುಕ್ತ ತನ್ನ ಸ್ನೇಹಿತರನ್ನು ಔತಣಕ್ಕೆಂದು ಮನೆಗೆ ಕರೆದಿದ್ದರು. ಈ ವೇಳೆ ಬಿರಿಯಾನಿ ಜೊತೆಗೆ 1.45 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವ್ಯಕ್ತಿಯೋರ್ವ ನುಂಗಿ ಹಾಕಿದ್ದಾನೆ. ಅಲ್ಲದೇ ಈ ಸಮಯದಲ್ಲಿ ಆತ ಮದ್ಯ ಸೇವಿಸಿದ್ದ.
ಭೋಜನ ಮುಗಿದು ಅತಿಥಿಗಳು ತೆರಳಿದ ಬಳಿಕ ಫಾತಿಮಾ ತನ್ನ ಬೀರುವಿನಲ್ಲಿದ್ದ ವಜ್ರದ ನೆಕ್ಲೇಸ್, ಚಿನ್ನದ ಸರ ಹಾಗೂ ವಜ್ರದ ಪೆಂಡೆಂಟ್ ಕಾಣೆಯಾಗಿರುವುದನ್ನು ಗಮನಿಸಿದರು. ಮನೆಗೆ ಬಂದಿದ್ದ ಅತಿಥಿಗಳನ್ನು ಪರಿಶೀಲಿಸಿದ ನಂತರ ತನ್ನ ಸ್ನೇಹಿತೆಯ ಗೆಳೆಯನೇ ಚಿನ್ನಾಭರಣಗಳನ್ನು ಕದ್ದಿದ್ದಾನೆ ಎಂದು ಶಂಕಿಸಿ ಫಾತಿಮಾ ವಿರುಗಂಬಾಕ್ಕಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಂತರ ಮೇ 4 ರಂದು ಬುಧವಾರ ಆತನನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಆರೋಪಿ ತಪ್ಪೋಪ್ಪಿಕೊಂಡಿದ್ದಾನೆ. ಬಳಿಕ ಪೊಲೀಸರು ಆತನ ಹೊಟ್ಟೆಯನ್ನು ಸ್ಕ್ಯಾನ್ ಮಾಡಿಸಿದಾಗ ಆಭರಣಗಳು ಹೊಟ್ಟೆಯಲ್ಲಿರುವುದು ದೃಢಪಟ್ಟಿದೆ.