ಮುಖ್ಯಮಂತ್ರಿ ಪದವಿಗಾಗಿ 2000 ಕೋಟಿ ಕೊಡುತ್ತೀವಿ ಎಂದು ದೆಹಲಿಗೆ ತೆರಳಿದವರೂ ನಮ್ಮಲ್ಲಿದ್ದಾರೆ ಎಂದು ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಬಸನಗೌಡ ಪಾಟೀಲ್ ಹೇಳಿದ್ದರು.
ಯತ್ನಾಳ್ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಉಂಟು ಸೃಷ್ಟಿಸಿದ್ದು ಮತ್ತೊಮ್ಮೆ ಬಿಜೆಪಿ ಪಕ್ಷ ಮುಜುಗರಕ್ಕೀಡಾಗಿದೆ. ಸದ್ಯದ ಬೆಳವಣಿಗೆಯಲ್ಲಿ ಬೊಮ್ಮಾಯಿ ಸರಕಾರ ಕಮಿಷನ್ ಸರಕಾರ ಎಂದು ಕರೆಸಿಕೊಸಿಕೊಳ್ಳುತ್ತಿರುವಾಗ ಯತ್ನಾಳ್ ಹೇಳಿಕೆ ಹೊಸ ಬಾಂಬನ್ನು ಸಿಡಿಸಿದೆ.
ರಾಜ್ಯ ಬಿಜೆಪಿ ನಾಯಕರು ಕೇಂದ್ರದ ವರಿಷ್ಟರಿಗೂ ಕಮಿಷನ್ ಕೊಟ್ಟು ಅಧಿಕಾರ ಪಡೆಯುತ್ತಿದ್ದಾರೆ. 2000 ಕೋಟಿಯಷ್ಟು ದೊಡ್ಡ ಮೊತ್ತ ದೆಹಲಿ ನಾಯಕರಿಗೆ ಅಮಿಷ ಒಡ್ಡಬೇಕಾದರೆ ರಾಜ್ಯದ ಕಜಾನೆಯಿಂದ ಬಲುದೊಡ್ಡ ಲೂಟಿ ನಡೆದಿದೆ. ಬಿಜೆಪಿ ನಾಯಕರು ರಾಜ್ಯದಿಂದ ಕೊಳ್ಳೆ ಹೊಡೆದು ಕೇಂದ್ರಕ್ಕೆ ತಲುಪಿಸುತ್ತಿದ್ದಾರೆಯೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಯತ್ನಾಳ್ ಹೇಳಿಕೆ ಪರ ಬ್ಯಾಟಿಂಗ್ ಮಾಡಿದ ನೆಟ್ಟಿಗರು ರಾಜ್ಯದಲ್ಲಿ ಮಾತ್ರವಲ್ಲ ಕೇಂದ್ರದಲ್ಲೂ ಕಮಿಷನ್ ಸರಕಾರವೇ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ