Home ಟಾಪ್ ಸುದ್ದಿಗಳು 9 ನಾಡ ಬಂದೂಕು ಪತ್ತೆ : ಪಾಲಾಕ್ಷಪ್ಪ ಎಂಬಾತ ಪೊಲೀಸ್ ವಶಕ್ಕೆ

9 ನಾಡ ಬಂದೂಕು ಪತ್ತೆ : ಪಾಲಾಕ್ಷಪ್ಪ ಎಂಬಾತ ಪೊಲೀಸ್ ವಶಕ್ಕೆ

ಶಿವಮೊಗ್ಗ: ಪರವಾನಗಿ ಇಲ್ಲದೆ ಬಂದೂಕು ರಿಪೇರಿ ಮಾಡಿ ಶೇಖರಿಸುತ್ತಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದ್ದು ಬಂಧಿತನನ್ನು ಪಾಲಾಕ್ಷಪ್ಪ (47) ಎಂದು ಗುರುತಿಸಲಾಗಿದೆ.  ಆತನಿಂದ 9 ನಾಡ ಬಂದೂಕುಗಳನ್ನೂ ಪೊಲೀಸರು  ವಶಕ್ಕೆ ಪಡೆದುಕೊಂಡಿದ್ದಾರೆ.

ಭದ್ರಾವತಿ ತಾಲೂಕು ಶಂಕರಘಟ್ಟ ಗ್ರಾಮದ ಮನೆಯಲ್ಲಿ ಪಾಲಾಕ್ಷಪ್ಪ ನಾಡ ಬಂದೂಕುಗಳ ರಿಪೇರಿ ಮಾಡುತ್ತಿದ್ದ ಎನ್ನಲಾಗಿದೆ.

ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರಿಗೆ ದೊರಕಿದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಫಾಲಾಕ್ಷಪ್ಪನ ಮೇಲೆ ಮನೆ ಮೇಲೆ ದಾಳಿ ನಡೆಸಿದ್ದು, ದಾಳಿ ವೇಳೆ 9 ಬಂದೂಕು ಪತ್ತೆಯಾಗಿವೆ ಮತ್ತು ಆಯುಧ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Join Whatsapp
Exit mobile version