Home ಟಾಪ್ ಸುದ್ದಿಗಳು ಮಾನವ ಹಕ್ಕುಗಳ ಕಾರ್ಯಕರ್ತನ ಬಂಧನ ಪ್ರಕರಣ: ಭುಗಿಲೆದ್ದ ಹಿಂಸಾಚಾರ

ಮಾನವ ಹಕ್ಕುಗಳ ಕಾರ್ಯಕರ್ತನ ಬಂಧನ ಪ್ರಕರಣ: ಭುಗಿಲೆದ್ದ ಹಿಂಸಾಚಾರ

ಮಣಿಪುರ: ಮಾನವ ಹಕ್ಕುಗಳ ಕಾರ್ಯಕರ್ತನ ಬಂಧನವನ್ನು ವಿರೋಧಿಸಿ ಚುರಾಚಂದ್ ಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ಮಣಿಪುರ ಮೂಲದ ಮಾನವ ಹಕ್ಕುಗಳ ಹೋರಾಟಗಾರ ಡಾಕ್ಟರ್ ಮಾರ್ಕ್ ತಂಗ್ಮಾಂಗ್ ಹಾಕಿಪ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನಕಾರರು ಜಿಲ್ಲಾಧಿಕಾರಿ ಕಚೇರಿಯತ್ತ ಮೆರವಣಿಗೆ ನಡೆಸುವುದನ್ನು ತಡೆಯುತ್ತಿದ್ದಾಗ ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಮಣಿಪುರದ 1949 ರ ವಿಲೀನ ಒಪ್ಪಂದದ ಕುರಿತು ಫೇಸ್ ಬುಕ್ ಪೋಸ್ಟ್ ಗಾಗಿ ಧರ್ಮದ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ಮಾರ್ಕ್ ಹಾಕಿಪ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಮಂಗಳವಾರ ನವದೆಹಲಿಯಲ್ಲಿ ಬಂಧಿಸಲಾಗಿತ್ತು.

Join Whatsapp
Exit mobile version