Home ಜಾಲತಾಣದಿಂದ ಭಾರತೀಯ ನೌಕಾಪಡೆಯ 8 ಯೋಧರಿಗೆ ಕತಾರ್’ನಲ್ಲಿ ಮರಣದಂಡನೆ: ಮಧ್ಯಪ್ರವೇಶಿಸದ ಮೋದಿ ವಿರುದ್ಧ ಖರ್ಗೆ ಕಿಡಿ

ಭಾರತೀಯ ನೌಕಾಪಡೆಯ 8 ಯೋಧರಿಗೆ ಕತಾರ್’ನಲ್ಲಿ ಮರಣದಂಡನೆ: ಮಧ್ಯಪ್ರವೇಶಿಸದ ಮೋದಿ ವಿರುದ್ಧ ಖರ್ಗೆ ಕಿಡಿ

ನವದೆಹಲಿ: ಕತಾರ್’ನಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಎಂಟು ಅಧಿಕಾರಿಗಳ ಜೀವ ಉಳಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸುತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.


‘ಈ ವಿಷಯದಲ್ಲಿ ಕೇಂದ್ರ ಸರ್ಕಾರ ಮೌನಕ್ಕೆ ಶರಣಾಗಿದೆ. ಇದು ಭಾರತ ವಿಶ್ವಗುರುವಾಗುತ್ತಿದೆ ಎಂದು ಕೊಚ್ಚಿಕೊಳ್ಳುತ್ತಿರುವ ಮೋದಿ ಸರ್ಕಾರದ ಬಣ್ಣವನ್ನು ಬಯಲು ಮಾಡಿದೆ’ ಎಂದು ಅವರು ಟ್ವೀಟ್’ನಲ್ಲಿ ವಾಗ್ದಾಳಿ ನಡೆಸಿದ್ದಾರೆ.


ಆಗಸ್ಟ್ 2022 ರಿಂದ ಕತಾರ್’ನಲ್ಲಿ ಏಕಾಂತ ಬಂಧನದಲ್ಲಿರುವ ಭಾರತೀಯ ನೌಕಾಪಡೆಯ 8 ನಿವೃತ್ತ ಯೋಧರು ಮರಣದಂಡನೆಯನ್ನು ಎದುರಿಸುತ್ತಿದ್ದಾರೆ. ಆದರೂ ಈ ವಿಷಯವನ್ನು ಇಲ್ಲಿಯವರೆಗೆ ಭಾರತದೊಂದಿಗೆ ಹಂಚಿಕೊಳ್ಳಲಾಗಿಲ್ಲ. ಮೋದಿ ಸರ್ಕಾರದ ದೀನ ಶರಣಾಗತಿಯು ಭಾರತವನ್ನು “ವಿಶ್ವಗುರು” ಮಾಡುವ ಅವರ ದೊಡ್ಡ ಹೇಳಿಕೆಗಳನ್ನು ಬಹಿರಂಗಪಡಿಸಿದೆ ಎಂದು ಕುಟುಕಿದ್ದಾರೆ.


ಭಾರತ – ಕತಾರ್‌ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ 50 ವರ್ಷ ತುಂಬಿವೆ. ಕತಾರ್’ನಲ್ಲಿ ವಾಸಿಸುತ್ತಿರುವ ವಿದೇಶಿಯರಲ್ಲಿ ಭಾರತೀಯರ ಸಂಖ್ಯೆಯೇ ಅಧಿಕ. ಫಿಫಾ ವಿಶ್ವಕಪ್‌ ವೇಳೆ ಮೋದಿ ಅವರು ಕತಾರ್ ಅಧ್ಯಕ್ಷರಿಗೆ ಕರೆ ಮಾಡಿ ಶುಭ ಕೋರಿದ್ದರು. ಆದರೆ, ದೇಶದ ಅಮೂಲ್ಯ ಜೀವಗಳನ್ನು ಉಳಿಸಲು ಮಧ್ಯಪ್ರವೇಶಿಸುತ್ತಿಲ್ಲ. ಇದು ನಿಮ್ಮ ರಾಷ್ಟ್ರೀಯತೆಯೇ’ ಎಂದು ಟ್ವೀಟ್’ನಲ್ಲಿ ಖರ್ಗೆ ಪ್ರಶ್ನಿಸಿದ್ದಾರೆ.

Join Whatsapp
Exit mobile version