Home ಟಾಪ್ ಸುದ್ದಿಗಳು ದೆಹಲಿಯಲ್ಲಿ 4.4 ತೀವ್ರತೆಯ ಭೂಕಂಪ: ಜನರಲ್ಲಿ ಆತಂಕ

ದೆಹಲಿಯಲ್ಲಿ 4.4 ತೀವ್ರತೆಯ ಭೂಕಂಪ: ಜನರಲ್ಲಿ ಆತಂಕ

0

ನವದೆಹಲಿ: ಒಂದು ಕಡೆ ಭಾರಿ ಮಳೆ ಸುರಿಯುತ್ತಿದ್ದರೆ, ಮತ್ತೊಂದು ಕಡೆ ಗುರುವಾರ ಬೆಳಗ್ಗೆ ದೆಹಲಿ ಮತ್ತು ಹತ್ತಿರದ ಪ್ರದೇಶಗಳಲ್ಲಿ 4.4 ತೀವ್ರತೆಯ ಭೂಕಂಪದ ಅನುಭವವಾಗಿದೆ. ಇದು ದೆಹಲಿಗರನ್ನು ಆತಂಕಕ್ಕೆ ದೂಡಿದೆ.

ಹರಿಯಾಣದ ಜಜ್ಜರ್‌ನಲ್ಲಿ ಇಂದು ಬೆಳಗ್ಗೆ 9:04 ಕ್ಕೆ 4.4 ತೀವ್ರತೆಯ ಭೂಕಂಪ ಸಂಭವಿಸಿದೆ. ದೆಹಲಿ – ಎನ್‌ಸಿಆರ್‌ನಲ್ಲಿ ಬಲವಾದ ಕಂಪನ ಆಗಿದೆ ಎಂದು ತಿಳಿದು ಬಂದಿದೆ.

ಭೂಮಿ ನಡುಗಿದ್ದು, ನಮ್ಮ ಅನುಭವಕ್ಕೆ ಬಂತು.. ನಿಜಕ್ಕೂ ಭಯಾನಕವಾಗಿತ್ತು, ನನ್ನ ವಾಹನವು ಇದ್ದಕ್ಕಿದ್ದಂತೆ ನಡುಗಿತು ಎಂದು ದೆಹಲಿಯ ವ್ಯಕ್ತಿಯೊಬ್ಬರು ತಮಗಾದ ಅನುಭವ ಹಂಚಿಕೊಂಡಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ. ಇನ್ನೊಬ್ಬ ದೆಹಲಿ ನಾಗರಿಕ ಈ ಬಗ್ಗೆ ಮಾತನಾಡಿದ್ದು, ಭೂಮಿ ನಡುಗಿತು, ಇದರಿಂದ ನಮಗೆ ಸ್ವಲ್ಪ ಭಯವಾಯ್ತು ಎಂದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version