Home ಟಾಪ್ ಸುದ್ದಿಗಳು ಉ.ಪ್ರ. ಸಿಎಂ ವಿರುದ್ಧ ಘೋಷಣೆ ಕೂಗಿದ, ಪ್ರತಿಕೃತಿ ದಹಿಸಿದವರ ವಿರುದ್ಧ ದೇಶದ್ರೋಹ ಕೇಸ್‌ : ಆರೋಪಿಗಳಿಗೆ...

ಉ.ಪ್ರ. ಸಿಎಂ ವಿರುದ್ಧ ಘೋಷಣೆ ಕೂಗಿದ, ಪ್ರತಿಕೃತಿ ದಹಿಸಿದವರ ವಿರುದ್ಧ ದೇಶದ್ರೋಹ ಕೇಸ್‌ : ಆರೋಪಿಗಳಿಗೆ ಹೈಕೋರ್ಟ್‌ ಜಾಮೀನು

ಲಖನೌ : ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ ವಿರುದ್ಧ ಘೋಷಣೆ ಕೂಗಿದ ಮತ್ತು ಅವರ ಪ್ರತಿಕೃತಿ ದಹಿಸಿದ ಕಾರಣಕ್ಕೆ ದೇಶದ್ರೋಹ ಪ್ರಕರಣ ದಾಖಲಿಸಲ್ಪಟ್ಟಿದ್ದ ಮೂವರು ಆರೋಪಿಗಳಿಗೆ ಅಲಹಾಬಾದ್‌ ಹೈಕೋರ್ಟ್‌ ಜಾಮೀನು ನೀಡಿದೆ.

ತಾವು ರಾಜಕೀಯ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೆವು, ಹೀಗಾಗಿ ದೇಶದ್ರೋಹದ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂಬುದನ್ನು ಆರೋಪಿಗಳು ಹೈಕೋರ್ಟ್‌ ಗೆ ಮನವರಿಕೆ ಮಾಡಿದ್ದಾರೆ. ನ್ಯಾ. ಸುನೀತ್‌ ಕುಮಾರ್‌ ಜಾಮೀನು ಮಂಜೂರು ಮಾಡಿದ್ದಾರೆ.

ಫೂಲ್‌ ಚಂದ್‌ ಯಾದವ್‌, ಆಶುತೋಷ್‌ ಅಗ್ರಹಾರಿ, ಸೂರಜ್‌ ಸಿಂಗ್‌ ಅವರ ವಿರುದ್ಧ ಐಪಿಸಿ ಕಲಂಗಳಾದ 147, 188, 269, 341, 124ಎ ಮತ್ತು ಐಟಿ ಕಾಯ್ದೆಯ ಕಲಂ 66 ಮತ್ತು ಯುಪಿಎಸ್‌ ಪಿ ಕಾಯ್ದೆಯ ಕಲಂ 6ರನ್ವಯ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಪ್ರಕಾರ, 12 ಮಂದಿ ಹೆಸರಿಸಲ್ಪಟ್ಟ ಮತ್ತು 10-12 ಮಂದಿ ಅಪರಿಚಿತ ವ್ಯಕ್ತಿಗಳು ಮುಖ್ಯಮಂತ್ರಿ ವಿರುದ್ಧ ಘೋಷಣೆ ಕೂಗಿದ್ದರು ಮತ್ತು ಪ್ರತಿಕೃತಿ ದಹನ ಮಾಡಿದ್ದರು ಎಂದು ಆಪಾದಿಸಲಾಗಿದೆ.

Join Whatsapp
Exit mobile version