Home ಟಾಪ್ ಸುದ್ದಿಗಳು ಪ್ರಜ್ವಲ್ ರೇವಣ್ಣ ಬಂಧನಕ್ಕಾಗಿ ಪ್ರತಿಭಟಿಸುತ್ತಿದ್ದವರ ಬಂಧನ: ಎಸ್ಡಿಪಿಐ ನಾಯಕರ ಆಕ್ರೋಶ

ಪ್ರಜ್ವಲ್ ರೇವಣ್ಣ ಬಂಧನಕ್ಕಾಗಿ ಪ್ರತಿಭಟಿಸುತ್ತಿದ್ದವರ ಬಂಧನ: ಎಸ್ಡಿಪಿಐ ನಾಯಕರ ಆಕ್ರೋಶ

ಬೆಂಗಳೂರು: ಅತ್ಯಂತ ನೀಚ ಮತ್ತು ಗಂಭೀರ ಅಪರಾಧ ಎಸಗಿದ ಆರೋಪದಲ್ಲಿರುವ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದ ಹನ್ನೆರಡು ಜನರನ್ನು ಕೊಪ್ಪಳ ಪೋಲಿಸರು ಬಂಧಿಸಿದ್ದಕ್ಕಾಗಿ ಎಸ್‌ಡಿಪಿಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್. ಬಾಸ್ಕರ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರೇ, ಕೋರ್ಟಲ್ಲಿ ನಿಮ್ಮ ವಕೀಲರು ರೇವಣ್ಣನನ್ನು ಬಂಧಿಸುವ ಅಗತ್ಯ ಇಲ್ಲ ಎಂದು ಹೇಳಿಕೆ ಸಲ್ಲಿಸಿದ್ದಾರಂತೆ. ಏನು ನಾಟಕ ಮಾಡ್ತಾ ಇದ್ದೀರ ನೀವೆಲ್ಲ ಎಂದು ಪ್ರಶ್ನಿಸಿದ್ದಾರೆ.

ಅಫ್ಸರ್ ಕೊಡ್ಲಿಪೇಟೆ ಕಿಡಿ: ನೀಚ ಕೃತ್ಯದಲ್ಲಿ ಭಾಗಿಯಾಗಿರುವ ಹಾಸನದ NDA ಅಭ್ಯರ್ಥಿ ಪ್ರಜ್ವಲ್‌ನನ್ನು ಬಂಧಿಸಲು ಒತ್ತಾಯಿಸಿ ಮತ್ತು BJPಯ ಪಕ್ಷಪಾತ ದೋರಣೆ ಖಂಡಿಸಿ ಬಳ್ಳಾರಿ ಜಿಲ್ಲೆಯ ಕಂಪ್ಲಿ ನಗರದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಎಸ್ಡಿಪಿಐ ಪಕ್ಷದ ಕಾರ್ಯಕರ್ತರನ್ನು ಬಂಧಿಸಿರುವ ಪೋಲಿಸರ ಕ್ರಮ ಖಂಡನೀಯ ಎಂದು ಪಕ್ಷದ ಮುಖಂಡ ಅಫ್ಸರ್ ಕೊಡ್ಲಿಪೇಟೆ ಕಿಡಿಗಾರಿದ್ದಾರೆ.

ತಕ್ಷಣ ಅವರನ್ನು ಬಿಡುಗಡೆ ಮಾಡುವಂತೆ ಬಳ್ಳಾರಿ ಎಸ್ಪಿಯವರಲ್ಲಿ ಆಗ್ರಹಿಸುತ್ತೇನೆ ಎಂದಿದ್ದಾರೆ.

ಮಾನ್ಯ ಸಿದ್ದರಾಮಯ್ಯನವರೇ SDPI ಪಕ್ಷವು ಒಂದು ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ವ್ಯಕ್ತಿಯನ್ನು ಬಂಧಿಸಲು ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿರುವುದು ತಪ್ಪೇ? ಸರ್ವಾಧಿಕಾರಿ ಮನಸ್ಥಿತಿಯ ಸರ್ಕಾರವು ವಿರೋಧ ಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಹೊರಟಿರುವುದು ಸರಿಯೇ ಎಂದು ಅಫ್ಸರ್ ಪ್ರಶ್ನಿಸಿದ್ದಾರೆ.

ಯಾಕೆ ನಿಮ್ಮ ಬುಲ್ಡೋಝರ್‌ಗಳು ಕಾಮಣ್ಣನ ಮನೆಗಳ ಮೇಲೆ ಆರ್ಭಟಿಸುದಿಲ್ಲ?: ಅನ್ವರ್ ಸಾದತ್ ಬಜತ್ತೂರು

ಹಾಸನದ NDA ಅಭ್ಯರ್ಥಿ ಪ್ರಜ್ವಲ್ ಕಾಮಣ್ಣ 2900 ಹಿಂದು ಹೆಣ್ಣು ಮಕ್ಕಳನ್ನು ತನ್ನ ಕಾಮದ ವಾಂಛೆಗೆ ಬಳಸಿಕೊಂಡಾಗಲಲೂ ಬಿಜೆಪಿ ಮೌನಕ್ಕೆ ಶರಣಾಗಿದೆ. ಈಗ ಯಾಕೆ ನಿಮ್ಮ ಬುಲ್ಡೋಝರ್‌ಗಳು ಕಾಮಣ್ಣನ ಮನೆಗಳ ಮೇಲೆ ಆರ್ಭಟಿಸುದಿಲ್ಲ ಎಂದು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಪ್ರಶ್ನಿಸಿದ್ದಾರೆ.

ನೇಹಾಳ ಕುಟುಂಬಸ್ಥರನ್ನು ಬೇಟಿಯಾದ ರಾಜ್ಯ ಮತ್ತು ಕೇಂದ್ರದ ಗೃಹ ಸಚಿವರುಗಳಿಗೆ ಹಾಸನದ ಸಂತ್ರಸ್ತೆಯರನ್ನು ಭೇಟಿಯಾಗಲು ಇನ್ನೂ ಸಮಯ ಕೂಡಿ ಬಂದಿಲ್ಲವೇ ? ಲವ್ ಜಿಹಾದ್ ಎಂದು ಕೂಗುವ ಸಂಘಿಗಳೇ ಪ್ರಜ್ವಲ್‌ನದ್ದು ಅದ್ಯಾವ ಜಿಹಾದ್ ಎಂದು ಬಿಜೆಪಿ ನಾಯಕರನ್ನು ಅನ್ವರ್ ಸಾದತ್ ಕೇಳಿದ್ದಾರೆ

Join Whatsapp
Exit mobile version