Home ಟಾಪ್ ಸುದ್ದಿಗಳು ಕಾಂಗ್ರೆಸ್ ಪಟ್ಟಿ ಮಾಡಿದ ಬಿಜೆಪಿಯ 22 ಹಗರಣಗಳನ್ನು ಸಿಬಿಐಗೆ ವಹಿಸಲಿ: ಈಶ್ವರಪ್ಪ

ಕಾಂಗ್ರೆಸ್ ಪಟ್ಟಿ ಮಾಡಿದ ಬಿಜೆಪಿಯ 22 ಹಗರಣಗಳನ್ನು ಸಿಬಿಐಗೆ ವಹಿಸಲಿ: ಈಶ್ವರಪ್ಪ

ವಿಜಯಪುರ: ಕಾಂಗ್ರೆಸ್ ಪಟ್ಟಿ ಮಾಡಿದ ಬಿಜೆಪಿಯ 22 ಹಗರಣಗಳನ್ನು ಸಿಬಿಐಗೆ ವಹಿಸಲಿ. ಸಿಬಿಐ ತನಿಖೆ ಮಾಡಿ ಕಳ್ಳರು ಯಾರು ಅಂತಾ ಹಿಡಿತಾರೆ. ಲೂಟಿ ಮಾಡಿದವರು ಜೈಲಿಗೆ ಹೋಗ್ತಾರೆ. ಜೈಲಿಗೆ ಹೋಗುವವರ ನಾಯಕತ್ವ ಸಿದ್ದರಾಮಯ್ಯ ತೆಗೆದುಕೊಳ್ಳುವುದರಲ್ಲಿ ಅನುಮಾನವಿಲ್ಲ ಎಂದು ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಮುಡಾ, ವಾಲ್ಮೀಕಿ ನಿಗಮ ಹಗರಣ ಸಂಬಂಧ ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿಮ್ಮ ಸರ್ಕಾರದಲ್ಲಿ ವಾಲ್ಮೀಕಿ ನಿಗಮ, ಮುಡಾ ಹಗರಣ ನಡೆದಿದೆ. ಪ್ರಕರಣಗಳನ್ನು ಸಿಬಿಐಗೆ ನೀಡಿ, ನೀವು ರಾಜೀನಾಮೆ ನೀಡಿ ತನಿಖೆ ಮುಗಿದು ಕ್ಲಿನ್‌ಚೀಟ್ ಪಡೆದು ಬೇಕಾದರೆ ಮತ್ತೆ ಅಧಿಕಾರಕ್ಕೆ ಬನ್ನಿ ಎಂದು ಸವಾಲು ಹಾಕಿದರು.

ಸಿದ್ದರಾಮಯ್ಯ ಸತ್ಯಹರಿಶ್ಚಂದ್ರ ನಾನೇ ಅಂತ ಹೇಳ್ಕೊಕೊಳ್ತಿದ್ರು. ಆದರೀಗ ಕಾಂಗ್ರೆಸ್ ಸರ್ಕಾರ ನೇರವಾಗಿ ಬಹಿರಂಗವಾಗಿ ಎರಡು ಹಗರಣಗಳಲ್ಲಿ ಬೆತ್ತಲಾಗಿದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳೇ ನೇರ ಭಾಗಿಯಾಗಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಬಿಜೆಪಿ ಭ್ರಷ್ಟಾಚಾರದ ತನಿಖೆ ಮಾಡ್ತೇವೆ ಎಂದು ವರಸೆ ತೆಗೆದಿದ್ದಾರೆ

Join Whatsapp
Exit mobile version