Home ಟಾಪ್ ಸುದ್ದಿಗಳು ಸದನದೊಳಗೆ ನಡೆಯುವ ಘಟನೆಗಳಿಗೆ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ: ಬಸವರಾಜ ಹೊರಟ್ಟಿ

ಸದನದೊಳಗೆ ನಡೆಯುವ ಘಟನೆಗಳಿಗೆ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ: ಬಸವರಾಜ ಹೊರಟ್ಟಿ

ಬೆಂಗಳೂರು: ಸದನದ ಒಳಗೆ ನಡೆಯುವ ಘಟನೆಗಳಿಗೆ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿ.ಟಿ ರವಿ – ಲಕ್ಷ್ಮಿ ಹೆಬ್ಬಾಳ್ಕರ್ ಕೇಸ್ ಮುಗಿದ ಅಧ್ಯಾಯ. ಡಿ.19ರಂದೇ ಸದನದಲ್ಲಿ ರೂಲಿಂಗ್ ಕೊಟ್ಟಿದ್ದೇನೆ. ಅನಿರ್ದಿಷ್ಟಾವಧಿ ವರೆಗೆ ಮುಂದೂಡಿಕೆ ಆಗಿದೆ. ಸದನದ ಒಳಗೆ ನಡೆಯುವ ಘಟನೆಗಳಿಗೆ ಪೊಲೀಸರು ಹಸ್ತಕ್ಷೇಪ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.

ಮಹಜರು ಮಾಡ್ತೀನಿ ಅಂತಾ ಪೊಲೀಸರು ಕೇಳಿದ್ರು, ಅದಕ್ಕೆ ನಾವು ಅನುಮತಿ ಕೊಟ್ಟಿಲ್ಲ, ಬಾಗಿಲು ಹಾಕಿದ್ದೇವೆ. ಸದನದಲ್ಲಿ ಮಹಜರು ಮಾಡಲು ಬರಲ್ಲ ಅಂತಾ ಪೊಲೀಸರಿಗೆ ತಿಳಿಸಿದ್ದೇನೆ. ಅವರು ಹೊರಗಿನ ವಿಚಾರಕ್ಕೆ ದೂರು ಕೊಟ್ಟಿದ್ರೆ, ಅದರ ಬಗ್ಗೆ ನಾವು ಹಸ್ತಕ್ಷೇಪ ಮಾಡಲ್ಲ. ಆದ್ರೆ ಆ ದಿನ ರಾತ್ರಿ 1 ಗಂಟೆ ತನಕವೂ ಸಿ.ಟಿ ರವಿ ಜೊತೆ ಸಂಪರ್ಕದಲ್ಲಿ ಇದ್ದೆ. ಪೊಲೀಸ್ ಆಯುಕ್ತರ ಜೊತೆಗೆ ಮಾತನಾಡಿ ಎಚ್ಚರಿಕೆ ಕೊಟ್ಟಿದ್ದೆ. ಏನಾದರೂ ಆದ್ರೆ ಸುಮ್ಮನೆ ಬಿಡಲ್ಲ ಅಂತ ಹೇಳಿದ್ದೆ. ಬೆಳಗ್ಗೆ ತನಕವೂ ನಾನು ಟ್ರ‍್ಯಾಕ್ ಮಾಡಿದ್ದೆ, ಬೆಳಗ್ಗೆ 5 ಗಂಟೆಗೆ ಎಸ್ಪಿಗೂ ಕೂಡ ಮಾತಾಡಿದ್ದೆ. ಅಲ್ಲದೇ ಈಗಾಗಲೇ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್‌ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ವಿವರಿಸಿದ್ದಾರೆ.

ಇನ್ನೂ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಪರಿಷತ್‌ನಲ್ಲಿ ನಿಂದನೆ ಆರೋಪ ಪ್ರಕರಣದಲ್ಲಿ ಮಹಿಳಾ ಆಯೋಗ ಎಂಟ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಹಿಳಾ ಆಯೋಗಕ್ಕೆ ಸಭಾಪತಿಗೆ ಕೇಳುವ ಅಧಿಕಾರ ಇಲ್ಲ, ಅವರು ಪತ್ರ ಬರೆಯಲಿ, ಆದ್ರೆ ಅದಕ್ಕೆ ನಾನು ಉತ್ತರ ಕೊಡಬೇಕಾಗಿಯೂ ಇಲ್ಲ. ಬೇಕಿದ್ರೆ, ಬೇರೆಯವರಿಗೆ ನೋಟೀಸ್ ಕೊಡಲಿ ಎಂದು ತಿಳಿಸಿದ್ದಾರೆ.

Join Whatsapp
Exit mobile version