Home ಟಾಪ್ ಸುದ್ದಿಗಳು ಮೃತದೇಹದೊಂದಿಗೆ ಸಂಭೋಗ ಅತ್ಯಾಚಾರವಲ್ಲ: ಛತ್ತೀಸಗಢ ಹೈಕೋರ್ಟ್

ಮೃತದೇಹದೊಂದಿಗೆ ಸಂಭೋಗ ಅತ್ಯಾಚಾರವಲ್ಲ: ಛತ್ತೀಸಗಢ ಹೈಕೋರ್ಟ್

ಛತ್ತೀಸಗಢ: ಮೃತದೇಹದೊಂದಿಗಿನ ಸಂಭೋಗವು ಭಾರತೀಯ ದಂಡ ಸಂಹಿತೆ ಸೆಕ್ಷನ್ 376 ರಡಿ ಅಥವಾ ಪೋಕ್ಸೊ ಕಾಯ್ದೆಯಡಿ ಅತ್ಯಾಚಾರವೆಂದು ಪರಿಗಣಿಸಲಾಗದು ಎಂದು ಛತ್ತೀಸಗಢ ಹೈಕೋರ್ಟ್ ಇತ್ತೀಚೆಗೆ ನೀಡಿದ ತೀರ್ಪಿನಲ್ಲಿ ಹೇಳಿದೆ.

ನ್ಯಾಯಮೂರ್ತಿಗಳಾದ ರಮೇಶ್ ಸಿನ್ಹಾ ಹಾಗೂ ಬುಭು ದತ್ತಾ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ. ಮೃತದೇಹದೊಂದಿಗಿನ ಲೈಂಗಿಕ ಕ್ರಿಯೆಯು ಯೋಚನೆ ಮಾಡಲೂ ಆಗದ ಹೀನಾಯ ಕೃತ್ಯವಾದರೂ, ಅದನ್ನು ಐಪಿಸಿ ಹಾಗೂ ಪೋಕ್ಸೊ ಕಾಯ್ದೆಯಡಿ ಅಪರಾಧ ಎಂದು ಪರಿಗಣಿಸಲಾಗದು ಎಂದು ಪೀಠ ಹೇಳಿದೆ.

ಅಲ್ಲದೇ ಈ ಎರಡೂ ಕಾನೂನು ಸಂತ್ರಸ್ತೆ ಜೀವಂತವಾಗಿದ್ದರೆ ಮಾತ್ರ ಅನ್ವಯವಾಗಲಿದೆ ಎಂದು ಕೋರ್ಟ್ ವಿವರಿಸಿದೆ.

‘ಕೃತ್ಯ ಹೀನಾಯವಾದರೂ, ಐಪಿಸಿಯ ಸೆಕ್ಷನ್ 363, 376 (3) ಹಾಗೂ 2012ರ ಪೋಕ್ಸೊ ಕಾಯ್ದೆಯ ಸೆಕ್ಷನ್‌ 6 ರಡಿ ಆರೋಪಿಯನ್ನು ಶಿಕ್ಷೆಗೆ ಗುರಿಪಡಿಸಲು ಆಗದು’ ಎಂದು ಪೀಠ ಹೇಳಿದೆ.

ಅಪ್ರಾಪ್ತೆಯನ್ನು ಅಪಹರಿಸಿ, ಅತ್ಯಾಚಾರ ಹಾಗೂ ಆಕೆಯ ಸಾವಿನ ಬಳಿಕವೂ ಲೈಂಗಿಕವಾಗಿ ದೌರ್ಜನ್ಯ ಎಸಗಿದ ಪ್ರಕರಣವೊಂದರಲ್ಲಿ ಕೋರ್ಟ್ ಈ ತೀರ್ಪು ನೀಡಿದೆ.

ಆರೋಪಿಗಳಾದ ನಿತಿನ್ ಯಾದವ್ ಹಾಗೂ ನೀಲಕಂಠ ನಾಗೇಶ ಎಂಬಿಬ್ಬರಿಗೆ ಐಪಿಸಿ ಹಾಗೂ ಪೋಕ್ಸೊ ಕಾಯ್ದೆಯ ವಿವಿಧ ಕಲಂಗಳಡಿ ಶಿಕ್ಷೆ ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Join Whatsapp
Exit mobile version