ರೈತ ಹೋರಾಟ: ಇಂದು ಏಳನೆ ಸುತ್ತಿನ ಮಾತುಕತೆ

Prasthutha|

ಹೊಸ ಕೃಷಿ ಕಾನೂನು ಹಿಂಪಡೆಯಬೇಕೆಂಬ ಬೇಡಿಕೆಯಲ್ಲಿ ದೃಢವಾಗಿ ನಿಂತ ರೈತರು

- Advertisement -

ಇಂದು ಕೇಂದ್ರ ಸರಕಾರದೊಂದಿಗೆ ಏಳನೆ ಸುತ್ತಿನ ಮಾತುಕತೆಯು ಆರಂಭವಾಗುವುದಕ್ಕಿರುವ ಸಂದರ್ಭದಲ್ಲಿ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಮತ್ತು ಕನಿಷ್ಠ ಬೆಂಬಲ ಬೆಲೆ ಖಾತರಿ ಒದಗಿಸಬೇಕೆಂಬ ತಮ್ಮ ಬೇಡಿಕೆಯಲ್ಲಿ ರೈತ ಒಕ್ಕೂಟಗಳು ದೃಢವಾಗಿ ನಿಂತಿದೆ. ಡಿಸೆಂಬರ್ 30ರಂದು ನಡೆದ ಕಳೆದ ಸಭೆಯಲ್ಲಿ ಎರಡೂ ಪಕ್ಷಗಳು ಕಳೆಗಳನ್ನುಸುಡುವುದಕ್ಕಾಗಿನ ದಂಡ ಮತ್ತು ವಿದ್ಯುತ್ ತಿದ್ದುಪಡಿ ಕಾಯ್ದೆ ವಿಷಯಗಳ ಮೇಲೆ ಸಂಧಾನಕ್ಕೆ ತಲುಪಿದ್ದವು.

ಪ್ರತಿಭಟನೆಯ ಕಾರಣದಿಂದಾಗಿ ದಿಲ್ಲಿಯ ಪ್ರಮುಖ ಗಡಿಗಳು ಈಗಲೂ ಮುಚ್ಚಿವೆ. ರವಿವಾರದಂದು ರಾಜಧಾನಿ ಮತ್ತು ಸುತ್ತಮುತ್ತ ಮಳೆಯಾದ ಕಾರಣದಿಂದ ರೈತರು ಟೆಂಟ್ ಗಳಲ್ಲಿ ಉಳಿದುಕೊಂಡರು.

- Advertisement -

ಕೊರೆಯುವ ಚಳಿಯ ಮಧ್ಯೆ ಹತ್ತಾರು ಸಾವಿರಾರು ರೈತರು ಕಳೆದ ಒಂದು ತಿಂಗಳಿಂದ ದಿಲ್ಲಿಯ ಗಡಿಗಳಲ್ಲಿ ಬೀಡುಬಿಟ್ಟಿದ್ದಾರೆ. ನಿಯಂತ್ರಿತ ಮಾರುಕಟ್ಟೆಗಳನ್ನು ಈ ಕಾನೂನುಗಳು ನಾಶಪಡಿಸಲಿದೆ ಮತ್ತ ತಮ್ಮ ಜೀವನಕ್ಕೆ ತೊಂದರೆಯುಂಟುಮಾಡಲಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ.  

Join Whatsapp
Exit mobile version