ಪುಣೆ: ಭಾರತ ವಿಶ್ವಗುರು ಆಗುವುದರ ಜತೆಗೆ ಜಗತ್ತನ್ನು ವಿಶ್ವಗುರುವನ್ನಾಗಿ ಮಾಡಬೇಕಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಡಾ ಮೋಹನ್ ಭಾಗವತ್ ಅವರು ಹೇಳಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸಹಜೀವನ ವ್ಯಾಖ್ಯನ್ಮಾಲಾ (ಉಪನ್ಯಾಸ ಸರಣಿ) 23 ನೇ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಅನಾದಿ ಕಾಲದಿಂದಲೂ ಪರಸ್ಪರ ಸಾಮರಸ್ಯದಿಂದ ಬದುಕುತ್ತಿದ್ದೇವೆ. ಜಗತ್ತು ಹಾಗೆ ಬದುಕಬೇಕಾದರೆ, ಭಾರತವು ಅದರೊಳಗೆ ಸಾಮರಸ್ಯದ ಮಾದರಿಯನ್ನು ಹೊಂದಿರಬೇಕು. ಹಿಂದೂ ರಾಷ್ಟ್ರದ ವಿಶಿಷ್ಟ ಲಕ್ಷಣವಾಗಿ ಅಂತರ್ಗತ ಸಮಾಜದ ಬಗ್ಗೆ ಒತ್ತಿ ಹೇಳಿದರು. ಭಾರತವು ಸೌಹಾರ್ದತೆಯಿಂದ ಬಾಳಬಹುದು ಎಂಬುದನ್ನು ಜಗತ್ತಿಗೆ ತೋರಿಸಬೇಕಾಗಿದೆ, ವಿಶ್ವಗುರು ಭಾರತದ ಸಾಮೂಹಿಕ ಆಶಯ ಕೂಡ ಅದೇ ಆಗಿರಬೇಕು ಎಂದು ಹೇಳಿದರು.
“ಜಗತ್ತಿಗೆ ನಿಜವಾಗಿಯೂ ವಿಶ್ವಗುರು ಬೇಕೇ? ಜಗತ್ತು ಇಂದು ಇರುವ ಸ್ಥಿತಿ, ಅಂತಹ ಯಾವುದೇ ಅಗತ್ಯದ ಅವಶ್ಯಕತೆಯನ್ನು ತೋರಿಸುತ್ತದೆಯೇ? ” ಇದಲ್ಲದೆ, ನಾವು ವಿವಿಧ ಕ್ಷೇತ್ರಗಳಲ್ಲಿ ದಾಪುಗಾಲು ಹಾಕುತ್ತಿದ್ದೇವೆ ಮತ್ತು ಆರ್ಥಿಕತೆ ಹಾಗೂ ಮೂಲಸೌಕರ್ಯವ ಭಾರತದಲ್ಲಿ ಬೆಳೆಯುತ್ತಿದೆ. ಪ್ರಪಂಚವು ತಾಂತ್ರಿಕವಾಗಿ ಪ್ರಗತಿ ಹೊಂದುತ್ತಿದೆ ಮತ್ತು ವೇಗವಾಗಿ ಬದಲಾಗುತ್ತಿದೆ. ಈಗ ಅನೇಕರು ಹೇಳಬಹುದು ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎಂದು. ಆದರೆ ಈ ಎಲ್ಲ ಅತಿಯಾದ ಬದಲಾವಣೆಯಿಂದ ಪರಿಸರದ ಅವನತಿಯಾಗುತ್ತಿದೆ. ಇದರಿಂದ ಜಾಗತಿಕ ನಾಶವಾಗುತ್ತದೆ ಎಂದು ಹೇಳಿದರು.