ಭಾರತದ ಆರ್ಥಿಕತೆಯು ಈ ವರ್ಷ ಶೇಕಡಾ 7.5 ರಷ್ಟು ಪ್ರಗತಿಗೊಳ್ಳುವ ಭರವಸೆಯಿದೆ : ಪ್ರಧಾನಿ ಮೋದಿ

Prasthutha|

ನವದೆಹಲಿ: ದೇಶದ ಆರ್ಥಿಕತೆಯು ಈ ವರ್ಷ ಶೇಕಡಾ 7.5 ರಷ್ಟು ಪ್ರಗತಿ ಹೊಂದುವ ಭರವಸೆಯಿದೆ ಎಂದು ಬ್ರಿಕ್ಸ್‌ ವಾಣಿಜ್ಯ ವೇದಿಕೆಯ ವರ್ಚುವಲ್‌ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

- Advertisement -

ದೇಶದ ಡಿಜಿಟಲ್‌ ಆರ್ಥಿಕತೆಯ ಮೌಲ್ಯವು 2025ರ ಸಂದರ್ಭದಲ್ಲಿ ಒಂದು ಟ್ರಿಲಿಯನ್‌ ಅಮೆರಿಕನ್‌ ಡಾಲರ್‌ ನಷ್ಟು ಮುಟ್ಟಲಿದೆ. ಇದು ಆರ್ಥಿಕತೆಯಲ್ಲಿ ಪ್ರಗತಿ ಹೊಂದುವ ಲಕ್ಷಣ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಡಿಜಿಟಲೀಕರಣ ದೇಶದ ಆರ್ಥಿಕತೆ ಚೇತರಿಕೆಗೊಳ್ಳಲು ಕಾರಣವಾಗುತ್ತದೆ. ಆದ್ದರಿಂದ ತಂತ್ರಜ್ಞಾನ ಆಧಾರಿತ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.

Join Whatsapp
Exit mobile version