Home ಟಾಪ್ ಸುದ್ದಿಗಳು ‘ದೊಡ್ಡ ಮನಸ್ಸು ಮಾಡಿ ನನ್ನ ಕ್ಷಮಿಸಿ’: ಬಿಗ್ ಬಾಸ್ ಹಂಸ

‘ದೊಡ್ಡ ಮನಸ್ಸು ಮಾಡಿ ನನ್ನ ಕ್ಷಮಿಸಿ’: ಬಿಗ್ ಬಾಸ್ ಹಂಸ

0

‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಹನುಮಂತ ವಿಜೇತರಾಗಿದ್ದಾರೆ. ಹೀಗಿರುವಾಗ ಹಂಸ ಅವರು ಈ ಹಿಂದೆ ಹನುಮಂತ ಬಗ್ಗೆ ಮಾತನಾಡಿರೋದು ಸಾಕಷ್ಟು ಕಾಂಟ್ರವರ್ಸಿ ಹುಟ್ಟುಹಾಕಿದೆ. ಈಗ ಈ ಬಗ್ಗೆ ಹಂಸ ಅವರು ಸ್ಪಷ್ಟನೆ ನೀಡಿದ್ದಾರೆ.

ಹಂಸ ಅವರು ಹೇಳಿದ್ದೇನು?
“ಬಿಗ್ ಬಾಸ್ ಮನೆಯಲ್ಲಿ ಧನರಾಜ್, ಹನುಮಂತ ಆರಂಭದಲ್ಲಿ ಸೈಲೆಂಟ್ ಆಗಿದ್ದರು, ಅಷ್ಟೇ ಅಲ್ಲದೆ ಮೂಲೆಯಲ್ಲಿ ಇರುತ್ತಿದ್ದರು. ಈಗ ಹನುಮಂತ ಫಿನಾಲೆಗೆ ಬಂದಿದ್ದಾರೆ. ಜನರು ಯಾರನ್ನಾದರೂ ಇಷ್ಟಪಟ್ಟರೆ ಅವರನ್ನು ತಲೆ ಮೇಲೆ ಎತ್ತಿಕೊಂಡು ಮೆರೆಸ್ತಾರೆ ಅಂತ ಹೇಳ್ತಾರೆ. ಹಾಗೆಯೇ ಹನುಮಂತ ಅವರನ್ನು ಇಷ್ಟಪಡ್ತಿದ್ದಾರೆ. ಹನುಮಂತ ಪಕ್ಕಾ ಗ್ರಾಮೀಣ ಪ್ರತಿಭೆ, ಬಡತನದಲ್ಲಿ ಬೆಳೆದವರು. ಹಳ್ಳಿ ಪ್ರತಿಭೆಗಳಿಗೆ, ಬಡವರಾದವರು ಸುಲಭವಾಗಿ ರಿಯಾಲಿಟಿ ಶೋನಲ್ಲಿ ಗ್ರ್ಯಾಂಡ್ ಫಿನಾಲೆಗೆ ತಲುಪುತ್ತಾರೆ. ಹನುಮಂತನ ವಿಚಾರದಲ್ಲಿ ಸಿಂಪಥಿ ವರ್ಕ್ ಆಗಿದೆ ಅಂತ ಹೇಳಬಹುದು. ಶಾಲೆ-ಕಾಲೇಜುಗಳಲ್ಲಿ ಜನರಲ್ ಕ್ಯಾಟಗರಿಗೆ ಹೆಚ್ಚು ಶುಲ್ಕ ಕಟ್ಟಬೇಕು, ಆದರೆ ಉಳಿದ ಕ್ಯಾಟಗರಿಯವರು ಶುಲ್ಕ ಕಡಿಮೆ ಕಟ್ಟಬೇಕಾಗಿ ಬರುತ್ತದೆ. ಉದ್ಯೋಗದ ವಿಚಾರದಲ್ಲಿ ಜನರಲ್ ಕ್ಯಾಟಗರಿಯನ್ನು ಕಡೆಗಾಣಿಸಲಾಗುತ್ತದೆ. ಆದರೆ ಉಳಿದ ಕ್ಯಾಟಗರಿಗೆ ಮನ್ನಣೆ ಕೊಡುತ್ತಾರೆ. ರಿಯಾಲಿಟಿ ಶೋಗಳಲ್ಲಿಯೂ ಇದೇ ಥರ ಆಗುತ್ತದೆ. ಪೇಟೆಯಲ್ಲಿ ಬೆಳೆದವರು ಆರಾಮಾಗಿರ್ತಾರೆ ಅಂತ ಹೇಳೋದುಂಟು” ಎಂದು ಹಂಸ ಅವರು ಹೇಳಿದ್ದರು. ಹಂಸ ಅವರು ಮೀಸಲಾತಿ ವಿಚಾರದ ಬಗ್ಗೆ ಮಾತನಾಡಿದ್ದು ಅನೇಕರಿಗೆ ಆಕ್ರೋಶ ತಂದಿದೆ. ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು.


ಕ್ಷಮೆ ಕೇಳಿದ ಹಂಸ
“ನಾನು ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಒಂದು ಹೇಳಿಕೆ ಭಾರೀ ಚರ್ಚೆ ಆಗ್ತಿದೆ. ಖಂಡಿತವಾಗಿಯೂ ನನ್ನ ಮಾತಿನ ಅರ್ಥ ಅದಾಗಿರಲಿಲ್ಲ. ನನ್ನ ಮಾತನ್ನು ಕೆಲವರು ಬೇರೆ ಬೇರೆ ರೀತಿ ಅರ್ಥ ಮಾಡಿಕೊಂಡು, ಬೇರೆ ಬೇರೆ ತಿರುವು ಕೊಡುತ್ತಿದ್ದಾರೆ. ನನ್ನ ಮಾತಿನಿಂದ ಯಾರಿಗೆಲ್ಲ ಬೇಸರ ಆಗಿದೆಯೋ ಅವರಿಗೆಲ್ಲರಿಗೂ ನಾನು ಕ್ಷಮೆ ಕೇಳುವೆ. ದಯವಿಟ್ಟು ಈ ವಿಷಯವನ್ನು ಇಲ್ಲಿಗೆ ಬಿಟ್ಟುಬಿಡಿ, ದೊಡ್ಡ ಮನಸ್ಸು ಮಾಡಿ ನನ್ನನ್ನು ಕ್ಷಮಿಸಿ” ಎಂದು ಹಂಸ ಅವರು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ ಈ ಪೋಸ್ಟ್ನ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version