Home ಟಾಪ್ ಸುದ್ದಿಗಳು ಇಸ್ರೇಲ್‌ | ಸಮ್ಮಿಶ್ರ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದ ವಿರೋಧ ಪಕ್ಷಗಳ ನಾಯಕರು

ಇಸ್ರೇಲ್‌ | ಸಮ್ಮಿಶ್ರ ಸರ್ಕಾರ ರಚನೆಗೆ ಸಿದ್ಧತೆ ನಡೆಸಿದ ವಿರೋಧ ಪಕ್ಷಗಳ ನಾಯಕರು

ಜೆರುಸಲೇಂ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಿರೋಧ ಪಕ್ಷದ ನಾಯಕರು ಹೊಸ ಸಮ್ಮಿಶ್ರ ಸರ್ಕಾರ ರಚಿಸುವ ಒಪ್ಪಂದ ನಡೆಸಿದ್ದು, ನೆತನ್ಯಾಹು ಅವರ ಅಧಿಕಾರ ಕೊನೆಗೊಳ್ಳಲಿದೆ.

ವಿರೋಧ ಪಕ್ಷದ ನಾಯಕ ಯೇರ್‌ ಲ್ಯಾಪಿಡ್ ಮತ್ತು ಮಾಜಿ ರಕ್ಷಣಾ ಸಚಿವ ನಫ್ತಾಲಿ ಬೆನೆಟ್‌ ಅವರು ಹೊಸ ಒಕ್ಕೂಟ ರಚಿಸುವ ವಿಚಾರವನ್ನು ಪ್ರಕಟಿಸಿದ್ದಾರೆ.

ಈ ಸರ್ಕಾರವು ಇಸ್ರೇಲ್‌ನ ಎಲ್ಲಾ ನಾಗರಿಕರ ಪರವಾಗಿ ಕೆಲಸ ಮಾಡಲಿದ್ದು, ಇಸ್ರೇಲ್ ಸಮಾಜದ ಐಕ್ಯತೆಗೆ ಶ್ರಮಿಸುವುದಾಗಿ ಲ್ಯಾಪಿಡ್ ಹೇಳಿದ್ದಾರೆ.

ಹೊಸ ಸರ್ಕಾರದಲ್ಲಿ ಲ್ಯಾಪಿಡ್ ಮತ್ತು ಬೆನೆಟ್, ಒಪ್ಪಂದದ ಪ್ರಕಾರ ಪ್ರಧಾನಿ ಕಾರ್ಯವನ್ನು ಪರಸ್ಪರ ಹಂಚಿಕೊಳ್ಳಲಿದ್ದು, ಬೆನೆಟ್ ಮೊದಲ ಎರಡು ವರ್ಷ ಸೇವೆ ಸಲ್ಲಿಸಲಿದ್ದಾರೆ. ನಂತರ ಲ್ಯಾಪಿಡ್ ಅಂತಿಮ ಎರಡು ವರ್ಷ ಪ್ರಧಾನಿಯಾಗಿ ಆಡಳಿತ ನಡೆಸಲಿದ್ದಾರೆ. ಈ ಒಪ್ಪಂದದಲ್ಲಿ ಯುನೈಟೆಡ್ ಇಸ್ಲಾಮಿಕ್ ಪಕ್ಷವಾದ ಯುನೈಟೆಡ್ ಅರಬ್ ಲಿಸ್ಟ್ ಕೂಡಾ ಕೈ ಜೋಡಿಸಿದ್ದು, ಇದು ಆಡಳಿತದ ಒಕ್ಕೂಟದ ಭಾಗವಾಗಿರುವ ಮೊದಲ ಅರಬ್ ಪಕ್ಷವಾಗಿದೆ. ಇಸ್ರೇಲ್ ಸಂಸತ್‌ನಲ್ಲಿ ಮುಂದಿನ ವಾರ ಮತದಾನ ನಡೆಯಲಿದೆ ಎಂದು ವರದಿಯಾಗಿದೆ.

Join Whatsapp
Exit mobile version