Home ಟಾಪ್ ಸುದ್ದಿಗಳು ಸೆಂಟ್ರಲ್‌ ವಿಸ್ಟಾ ಯೋಜನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ಗೆ ಮೇಲ್ಮನವಿ

ಸೆಂಟ್ರಲ್‌ ವಿಸ್ಟಾ ಯೋಜನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ ಗೆ ಮೇಲ್ಮನವಿ

ನವದೆಹಲಿ : ಸೆಂಟ್ರಲ್‌ ವಿಸ್ಟಾ ಕಾಮಗಾರಿಗೆ ತಡೆ ನೀಡಲು ನಿರಾಕರಿಸಿರುವ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಸೆಂಟ್ರಲ್‌ ವಿಸ್ಟಾ ಒಂದು ಪ್ರಮುಖ ಹಾಗೂ ಅಗತ್ಯ ರಾಷ್ಟ್ರೀಯ ಯೋಜನೆ ಎಂದು ಹೈಕೋರ್ಟ್‌ ನೀಡಿರುವ ಆದೇಶ ಸಮರ್ಥನೀಯವಲ್ಲ ಎಂದು ಅರ್ಜಿದಾರ ಪ್ರದೀಪ್‌ ಕುಮಾರ್‌ ಮೇಲ್ಮನವಿಯಲ್ಲಿ ತಿಳಿಸಿದ್ದಾರೆ.

ಲಾಕ್‌ ಡೌನ್‌ ವೇಳೆ ಇಡೀ ದೇಶ ಅಗತ್ಯ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿರುವಾಗ ಸೆಂಟ್ರಲ್‌ ವಿಸ್ಟಾ ಕಾಮಗಾರಿಯನ್ನು ಅಗತ್ಯ ರಾಷ್ಟ್ರೀಯ ಯೋಜನೆ ಎನ್ನುವುದು ಸರಿಯಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ. ಈ ಕಾಮಗಾರಿಗೆ ತಡೆ ಕೋರಿದ್ದ ಅರ್ಜಿದಾರರಿಗೆ ದೆಹಲಿ ಹೈಕೋರ್ಟ್‌ ಒಂದು ಲಕ್ಷ ರೂ. ದಂಡ ವಿಧಿಸಿತ್ತು.

Join Whatsapp
Exit mobile version