ನವದೆಹಲಿ: ಏನೋ ಮಾಡಲು ಹೋಗಿ ಏನೋ ಆದ ಎಂಬಂತಾಗಿದೆ ಈ ನೂತನ ವಧು ವರರ ಕಥೆ. ಮದುವೆಯನ್ನ ಅದ್ಧೂರಿಯನ್ನಾಗಿ ಮಾಡುವದರ ಜೊತೆಗೆ ಏನಾದರೂ ವಿಭಿನ್ನವಾಗಿ ಮಾಡಬೇಕು ಎಂಬುದು ಬಹುತೇಕರ ಕನಸು. ಆದರೆ ಇಲ್ಲೊಂದು ಜೋಡಿ ಮದುವೆ ಮಂಟಪಕ್ಕೆ ವಿಭಿನ್ನವಾಗಿ ಗ್ರ್ಯಾಂಡ್ ಎಂಟ್ರಿ ನೀಡಲು ಹೋಗಿ ಯಡವಟ್ಟು ಮಾಡಿಕೊಂಡಿದೆ.
ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದು ವೈರಲ್ ಆಗುತ್ತಿದ್ದು, ಮದುವೆಯ ಡಿನ್ನರ್ ನಡೆಯುತ್ತಿದ್ದ ಸ್ಥಳಕ್ಕೆ ‘ಆಕಾಶ’ದಿಂದ ಎಂಟ್ರಿ ಕೊಡಲು ಹೋಗಿ ನವ ವಧುವರರು ಮೈಕೈ ನೋವು ಮಾಡಿಕೊಂಡಿದ್ದಾರೆ. ದೊಡ್ಡ ಕ್ರೇನ್ ಒಂದರಲ್ಲಿ ತಾತ್ಕಾಲಿಕ ಸೋಫಾ ಒಂದನ್ನುವನ್ನು ಸೆಟ್ ಮಾಡಿ ಅದರಲ್ಲಿ ಕುಳಿತ ವಧುವರರು ಸಭಾಂಗಣಕ್ಕೆ ನಿಧಾನವಾಗಿ ಕೆಳಗಿಳಿಯುತ್ತಿದ್ದರು. ಡಿನ್ನರ್ ಪಾರ್ಟಿಯಲ್ಲಿ ಸೇರಿದ್ದವರೆಲ್ಲರೂ ವಧುವರರ ಗ್ರ್ಯಾಂಡ್ ಎಂಟ್ರಿ ನೋಡಿ ಖುಷಿಯಿಂದ ಚಪ್ಪಾಳೆ ತಟ್ಟುತ್ತಿದ್ದರು. ಆದರೆ ಇನ್ನೇನು ಕೆಳಕ್ಕಿಳಿಯಬೇಕು ಎನ್ನುವಷ್ಟರಲ್ಲಿ 10 ಅಡಿ ಎತ್ತರದಿಂದಲೇ ಸೋಫಾದಿಂದ ಬ್ಯಾಲೆನ್ಸ್ ಕಳೆದುಕೊಂಡು WWF ಸ್ಟೈಲ್’ನಲ್ಲಿ ಕೆಳಗಿದ್ದ ಟೇಬಲ್ ಮೇಲೆ ಬಿದ್ದಿದ್ದಾರೆ.
ಬ್ರೈಡ್ಸ್ ಸ್ಪೆಷಲ್ ಎಂಬ ಇನ್ಸ್ಟಾಗ್ರಾಮ್ ಅಕೌಂಟ್’ನಲ್ಲಿ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.